ಕೈಗಳಿಲ್ಲದೇ ಹುಟ್ಟಿದ ಜೆಸ್ಸಿಕಾಗೆ ವಿಮಾನ ಚಾಲಕಿಯಾಗಬೇಕೆಂಬ ಆಶೆ ಹುಟ್ಟಿಕೊಂಡಿದೆ. ಕೈಗಳಿಲ್ಲವೆಂಬ ಚಿಂತೆಯಲ್ಲಿ ತನ್ನ ಕನಸನ್ನು ಮರೆತು ಬಿಡಲು ನಿರ್ಧರಿಸಿಲ್ಲ ಆಕೆ. ಕಾಲಿನಿಂದಲೇ ವಿಮಾನವನ್ನು ಚಲಾಯಿಸುವ ಪಣ ತೊಟ್ಟಿದ್ದಾಳೆ. ಅಂತೆಯೇ ಸತತ ಪರಿಶ್ರಮ, ಛಲದಿಂದ ಅದನ್ನೀಗ ಆಕೆ ಸಾಧಿಸಿದ್ದಾಳೆ. ಈಗ ಆಕೆ ನುರಿತ ಪೈಲಟ್ ಎನಿಸಿಕೊಂಡಿದ್ದಾಳೆ