ಮೆಕ್ಸಿಕನ್ನರು ಟ್ರಂಪ್ ಮೇಲಿನ ಸೇಡಿಗೆ ತಯಾರಿಸಿದ್ರು ಟ್ರಂಪ್‌ ಬ್ರಾಂಡ್‌ ಟಾಯ್ಲೆಟ್‌ ಪೇಪರ್

ಭಾನುವಾರ, 4 ಜೂನ್ 2017 (12:52 IST)
ನ್ಯೂಯಾರ್ಕ್:ವಲಸೆ ನೀತಿಗಳಲ್ಲಿ ಬದಲಾವಣೆ ತಂದು ಹಲವು ದೇಶಗಳಿಗೆ ಸಂಕಷ್ಟಕ್ಕೀಡುಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲಡ್ ಟ್ರಂಪ್ ಮೇಲೆ ಸೇಡು ತೀರಿಸಿಕೊಳ್ಳಲು ಹಲವು ದೇಶಗಳ ಜನತೆ ಕಾಯುತ್ತಿದ್ದಂತಿದೆ. ಕಾರಣ ಚುನಾವಣಾ ಪ್ರಚಾರದ ಸಮಯದಿಂದಲೂ ಮೆಕ್ಸಿಕನ್ನರ ವಿರುದ್ಧ ಟ್ರಂಪ್‌ ಹರಿಹಾಯುತ್ತಲೇ ಇದ್ದಾರೆ. ತಮಗೆ ಇಷ್ಟೆಲ್ಲಾ ಅವಮಾನ ಮಾಡುತ್ತಿರುವ ಟ್ರಂಪ್‌ ವಿರುದ್ಧ ಮೆಕ್ಸಿಕನ್ನರು ಪ್ರತೀಕಾರ ತೀರಿಸಿಕೊಳ್ಳಲು ಟ್ರಂಪ್ ಬ್ರಾಂಡ್ ಟಾಯ್ಲೆಟ್ ಪೇಪರ್ ತಯಾರಿಸುವ ಮೂಲಕ ಕೋಪ ಹೊರಹಾಕಿದ್ದಾರೆ.
 
ಆ್ಯಂಟೊನಿಯೊ ಬಟ್ಟಾಗ್ಲಿಯಾ ಎಂಬ ವಕೀರೊಬ್ಬರು ಟ್ರಂಪ್‌ ಮೇಲಿನ ಸಿಟ್ಟೆಲ್ಲವನ್ನೂ "ಟ್ರಂಪ್‌ ಬ್ರಾಂಡ್‌ ಟಾಯ್ಲೆಟ್‌ ಪೇಪರ್‌' ತಯಾರಿಸುವ ಮೂಲಕ ಹೊರಹಾಕಿದ್ದು, ಟ್ರಂಪ್‌' ಹೆಸರಿನ ಟಾಯ್ಲೆಟ್‌ ಪೇಪರ್‌ನಿಂದ ಬಂದ ಲಾಭವನ್ನು ಅವರು ಅಮೆರಿಕದಿಂದ ವಾಪಸಾದ ಮೆಕ್ಸಿಕೋ ನಿರಾಶ್ರಿತರಿಗೆ ಸಹಾಯಕ್ಕೆ ಬಳಸುತ್ತಾರಂತೆ.
 
ಈ ಪೇಪರ್‌ಗಳ ಮೇಲೆ ಟ್ರಂಪ್‌ ರ ವ್ಯಂಗ್ಯಚಿತ್ರ ಮತ್ತು ಅವರ ಜನಪ್ರಿಯ ಸ್ಲೋಗನ್‌ "ಸಾಫ್ಟ್ ನೆಸ್‌ ವಿದೌಟ್‌ ಬಾರ್ಡರ್'ಗಳನ್ನು ಚಿತ್ರಿಸಲಾಗಿದೆ. ಮೆಕ್ಸಿಕನ್ನರ ಬಗ್ಗೆ ಟ್ರಂಪ್‌ ತುಂಬಾ ಕೇವಲವಾಗಿ ಮಾತಾಡಿದ್ದಾರೆ. ನಾವದನ್ನು ಸಹಿಸುವುದಿಲ್ಲ ಎಂಬ ಸಂದೇಶ ನೀಡಲು ನಾನು ಈ ಮಾರ್ಗ ಆಯ್ದುಕೊಳ್ಳಲಾಗಿದೆ.
 

ವೆಬ್ದುನಿಯಾವನ್ನು ಓದಿ