ಕಿಮ್ ಜಾಂಗ್ ಬಿಬಿಸಿ ಸಂದರ್ಶನದಲ್ಲಿ ಸೇನಾ ಕಮಾಂಡರ್ ಮಾಹಿತಿ

ಮಂಗಳವಾರ, 12 ಅಕ್ಟೋಬರ್ 2021 (09:22 IST)
ಪ್ಯಾಂಗ್ಯಾಂಗ್  : ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ನ ಆಡಳಿತ, ಹಣಕ್ಕಾಗಿ ನಡೆಸುವ ಕೃತ್ಯಗಳು, ಹತ್ಯೆಯಿಂದ ಹಿಡಿದು ಡ್ರಗ್ ಡೀಲ್ಗಳವರೆಗೆ ಹಲವು ಪ್ರಮುಖ ವಿಚಾರಗಳನ್ನು ಅಲ್ಲಿನ ಪ್ರಮುಖ ಸೇನಾ ಕಮಾಂಡರ್ ಒಬ್ಬರು ಬಹಿರಂಗಪಡಿಸಿದ್ದಾರೆ.

ಕಿಮ್ ಜಾಂಗ್ನ “ಕಣ್ಣು, ಕಿವಿ ಮತ್ತು ಮೆದುಳು’ ಎಂದೇ ಬಿಂಬಿಸಲಾದ ಬೇಹುಗಾರಿಕಾ ಸಂಸ್ಥೆಯಲ್ಲಿ 30 ವರ್ಷಗಳ ಕಾಲ ಕಾರ್ಯನಿರ್ವಹಿಸಿರುವ ಸೇನಾ ಕಮಾಂಡರ್, ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಈ ವಿಚಾರ ಬಾಯಿಬಿಟ್ಟಿದ್ದಾರೆ.
“ಕಿಮ್ ಜಾಂಗ್ನ ಆದೇಶದ ಮೇರೆಗೆ ನಾವು ಆಡಳಿತದ ಹಲವು ರಹಸ್ಯಗಳನ್ನು ಸೋರಿಕೆಯಾಗದಂತೆ ರಕ್ಷಿಸಿದ್ದೇವೆ, ಕೊಲೆಗಳ ಮೇಲೆ ಕೊಲೆಗಳನ್ನು ಮಾಡಿದ್ದೇವೆ, ಹಣಕ್ಕಾಗಿ ಅಕ್ರಮ ಮಾದಕದ್ರವ್ಯಗಳ ಪ್ರಯೋಗಾಲಯಗಳನ್ನೇ ತೆರೆದಿದ್ದೇವೆ. ಸರ್ವಾಧಿಕಾರಿ ಕಿಮ್ಗೆ ಯಾವ ಮೂಲದಿಂದ, ಹೇಗಾದರೂ ಸರಿಯೇ ಹಣವೊಂದು ಬಂದರೆ ಸಾಕು ಎಂಬ ಯೋಚನೆಯಿದೆ. ಅದಕ್ಕಾಗಿ ಆತ ಏನು ಮಾಡಲಿಕ್ಕೂ ಹೇಸುವುದಿಲ್ಲ. ಅಕ್ರಮ ಡ್ರಗ್ಗಳ ತಯಾರಿಕೆ ಮತ್ತು ಮಾರಾಟ, ನಕಲಿ ಗೃಹೋಪಯೋಗಿ ವಸ್ತುಗಳ ಉತ್ಪಾದನೆ ಮತ್ತು ಮಾರಾಟ, ಮಾನವ ಕಳ್ಳಸಾಗಣೆ, ಶಸ್ತ್ರಾಸ್ತ್ರ ಕಳ್ಳಸಾಗಣೆ, ವನ್ಯಜೀವಿಗಳ ಕಳ್ಳಸಾಗಣೆ, ನಕಲಿ ನೋಟು ಮುದ್ರಣ, ಭಯೋತ್ಪಾದನೆಯಂಥ ಚಟುವಟಿಕೆಗಳನ್ನು ಹಣಕ್ಕಾಗಿ ನಡೆಸಲಾಗುತ್ತಿದೆ’ ಎಂದೂ ಸೇನಾ ಕಮಾಂಡರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ