ನಾಪತ್ತೆಯಾದ ಈಜಿಪ್ಟ್ ವಿಮಾನ ಅಪಘಾತಕ್ಕೀಡಾಗಿರುವ ಶಂಕೆ

ಗುರುವಾರ, 19 ಮೇ 2016 (14:08 IST)
ಪ್ಯಾರಿಸ್‌ನಿಂದ ಕೈರೋಗೆ  ಪ್ರಯಾಣಬೆಳೆಸುತ್ತಿದ್ದ 66 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಒಯ್ಯುತ್ತಿದ್ದ ಈಜಿಪ್ಟ್ ಏರ್ ಫ್ಲೈಟ್  ಗುರುವಾರ ನಾಪತ್ತೆಯಾಗಿದ್ದು, ಮೆಡಿಟರೇನಿಯನ್ ಸಮುದ್ರದಲ್ಲಿ ರೆಡಾರ್ ವ್ಯಾಪ್ತಿಯಿಂದ ಕಣ್ಮರೆಯಾಗಿದೆ ಎಂದು ಈಜಿಪ್ಟ್ ನ್ಯಾಷನಲ್ ಏರ್‌ಲೈನ್ ತಿಳಿಸಿದೆ.
 
ಏರ್ ಬಸ್ ಎ 320 ಬಹುಶಃ ಸಮುದ್ರಕ್ಕೆ ಉರುಳಿಬಿದ್ದು ಅಪಘಾತವಾಗಿರಬಹುದು ಎಂದು ಈಜಿಪ್ಟ್ ನಾಗರಿಕ ವಿಮಾನ ಯಾನ ಇಲಾಖೆ ಮತ್ತು ಏರ್‌ಲೈನ್ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿ 30 ಈಜಿಪ್ಟರು, 15 ಫ್ರೆಂಚ್ ರಾಷ್ಟ್ರೀಯರು ಮತ್ತು ಒಬ್ಬ ಬ್ರಿಟನ್ ಮತ್ತು ಒಬ್ಬರು ಬೆಲ್ಜಿಯನ್ ಇದ್ದರು. 
 
ಈಜಿಪ್ಟ್ ಮತ್ತು ಗ್ರೀಕ್ ಮಿಲಿಟರಿ ವಿಮಾನ ಮತ್ತು ದೋಣಿಗಳ ಮೂಲಕ ನಾಪತ್ತೆಯಾದ ವಿಮಾನದ ಶೋಧಕ್ಕೆ ಧಾವಿಸಿವೆ. 
ವಿಮಾನದಲ್ಲಿ 56 ಪ್ರಯಾಣಿಕರಿದ್ದು ಒಂದು ಮಗು ಮತ್ತು 2 ನವಜಾತ ಶಿಶುಗಳು, 10 ಸಿಬ್ಬಂದಿಯಿದ್ದರು ಎಂದು ಈಜಿಪ್ಟ್ ಏರ್ ತಿಳಿಸಿದೆ. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ