ತಮ್ಮ 87 ವರ್ಷಗಳ ಜೀವಿತಾವಧಿಯಲ್ಲಿ ಅರ್ಧಕ್ಕೂ ಹೆಚ್ಚು ಸಮಯವನ್ನು ಕೊಲ್ಕತಾದ ಬೀದಿ, ಬೀದಿಗಳಲ್ಲಿ ದೀನರ, ನಿರ್ಗತಿಕರ ಸೇವೆ ಮಾಡಿದ ತೆರೇಸಾ ದೀನರ ತಾಯಿ ಎಂದೇ ಹೆಸರಾಗಿದ್ದರು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದ 12 ಮಂದಿಯ ನಿಯೋಗ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಮಂದಿ ತೆರೆಸಾಗೆ ಸಂತ ಪದವಿ ನೀಡಿದ ಘಟನೆಗೆ ಸಾಕ್ಷಿಯಾದರು.
ತೆರೇಸಾ ಕುಷ್ಠ ರೋಗಿಗಳಿಗೆ ಸೇವೆಯನ್ನು ಮಾಡುವ ಮೂಲಕ ತಾಯಿ ಎನಿಸಿಕೊಂಡಿದ್ದರು. ಅವರ ಸೇವೆಯನ್ನು ಮೆಚ್ಚಿ ಭಾರತ ಸರ್ಕಾರ ಭಾರತ ರತ್ನ ಪುರಸ್ಕಾರ ನೀಡಿ ಸನ್ಮಾನಿಸಿದೆ. ಮದರ್ ತೆರೇಸಾ ಅವರ ದೀನ, ದಲಿತರ ಸೇವೆಗಾಗಿ ನೊಬೆಲ್ ಪ್ರಶಸ್ತಿ ಪುರಸ್ಕಾರವನ್ನು ಕೂಡ ಪಡೆದಿದ್ದರು.