ಅಪ್ರಾಪ್ತ ಪುತ್ರಿಯನ್ನೇ ಮಾರಾಟ ಮಾಡಲು ಹೊರಟ ಹೆತ್ತ ತಾಯಿ

ಶನಿವಾರ, 18 ನವೆಂಬರ್ 2023 (09:42 IST)
ಮಹಿಳೆಯೊಬ್ಬಳು ತನ್ನ ಪುತ್ರಿಯ ಕನ್ಯತ್ವ ಮಾರಾಟ ಮಾಡಲು ಯತ್ನಿಸುತ್ತಿದ್ದಾಳೆ ಎನ್ನುವ ಮಾಹಿತಿ ಪಡೆದ ಸಾಮಾಜಿಕ ಕಾರ್ಯಕರ್ತರು ಅಪರಾಧ ವಿಭಾಗದ ಪೊಲೀಸರ ನೆರವಿನಿಂದ ಬಾಲಕಿಯನ್ನು ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
 
ನಗರದ  ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಯೊಬ್ಬಳು 13 ವರ್ಷ ವಯಸ್ಸಿನ ಪುತ್ರಿಯ ಕನ್ಯತ್ವವನ್ನು 1 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವಾಗ ಪೊಲೀಸರ ಅತಿಥಿಯಾಗಿದ್ದಾಳೆ.
 
ಘಟನೆಯ ವಿವರ: ಅಟೋದಲ್ಲಿ ಸಾಮಾಜಿಕ ಕಾರ್ಯಕರ್ತನೊಬ್ಬ ಪ್ರಯಾಣಿಸುತ್ತಿದ್ದ. ಪ್ರಯಾಣಿಕನೊಂದಿಗೆ ಮಾತಿಗಿಳಿದ ಅಟೋ ಚಾಲಕ ಕನ್ಯತ್ವ ಮಾರಾಟಕ್ಕಿರುವ ಬಾಲಕಿಯ ಬಗ್ಗೆ ನನಗೆ ತಿಳಿದಿದೆ. ನಿಮಗೆ ಬಾಲಕಿ ಬೇಕಾದಲ್ಲಿ ನಾನು ನೆರವು ನೀಡುತ್ತೇನೆ ಎಂದು ಹೇಳಿದ. ಅಟೋ ಚಾಲಕನ ಮಾತಿನಿಂದ ಸಾಮಾಜಿಕ ಕಾರ್ಯಕರ್ತ ಆಘಾತಗೊಂಡರೂ ಮೇಲ್ನೋಟಕ್ಕೆ ತೋರ್ಪಡಿಸದೆ ಆತನ ಮೊಬೈಲ್ ಸಂಖ್ಯೆಯನ್ನು ಪಡೆದು ಹಾರ್ಮೋನಿ ಫೌಂಡೇಶನ್‌ಗೆ ತೆರಳಿದ.
 
ಸಾಮಾಜಿಕ ಕಾರ್ಯಕರ್ತ ಅಟೋಚಾಲಕನನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಬಾಲಕಿಯ ಬಗ್ಗೆ ಮಾಹಿತಿ ನೀಡು ಎಂದು ಕೇಳಿದ. ಮುಂಬ್ರಾದಲ್ಲಿರುವ ಮನೆಯಲ್ಲಿ ಬಾಲಕಿಯಿದ್ದು, ಒಂದು ರಾತ್ರಿಗೆ 3 ಲಕ್ಷ ರೂಪಾಯಿಗಳನ್ನು ನೀಡಬೇಕಾಗುತ್ತದೆ ಎಂದು ಅಟೋ ಚಾಲಕ ವಿವರಣೆ ನೀಡಿದ..
 
ಬಾಲಕಿಯನ್ನು ಖರೀದಿಸುವವರು ತಮ್ಮ ಇಚ್ಚೆಗೆ ಅನುಸಾರವಾಗಿ ಅವಳೊಂದಿಗೆ ಲೈಂಗಿಕ ಸುಖ ಅನುಭವಿಸಬಹುದು. ಬಾಲಕಿ ಈಗ ತಾನೆ ಋತುಮತಿಯಾಗಿದ್ದು, 3 ದಿನಗಳ ನಂತ್ರ ಬಾಲಕಿಯನ್ನು ಕರೆದೊಯ್ಯಬಹುದು ಎಂದು ತಿಳಿಸಿದ.
 
ಬಾಲಕಿಯನ್ನು ಇತರರಿಗೆ ಮಾರಾಟ ಮಾಡಬಾರದು ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸಾಮಾಜಿಕ ಕಾರ್ಯಕರ್ತ, ಅಟೋಚಾಲಕನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಅಟೋಚಾಲಕ ಬಾಲಕಿಯ ಫೋಟೋ ತೋರಿಸಿ ಒಂದು ರಾತ್ರಿಗೆ 1 ಲಕ್ಷ ರೂ.ಕೊಟ್ಟರೂ ಸಾಕು ಎಂದು ರೇಟ್ ಕೂಡಾ ಇಳಿಸಲು ಸಿದ್ದವಾದ. ರವಿವಾರದಂದು ಸಾಮಾಜಿಕ ಕಾರ್ಯಕರ್ತನಿಗೆ ಕರೆ ಮಾಡಿದ ಅಟೋಚಾಲಕ ಬಾಲಕಿಯ ಋತುಮತಿ ದಿನಗಳು ಮುಕ್ತಾಯವಾಗಿದ್ದು, ಹಣ ಪಾವತಿಸಿ ಬಾಲಕಿಯನ್ನು ಕರೆದುಕೊಂಡು ಹೋಗುವಂತೆ ಹೇಳಿದ.
 
 ಮಧ್ಯಾಹ್ನ ಸಾಮಾಜಿಕ ಕಾರ್ಯಕರ್ತ ಮತ್ತು ಆತನ ಸಹದ್ಯೋಗಿ  ಅಟೋ ಚಾಲಕನನ್ನು ಭೇಟಿ ಮಾಡಿ 10 ಸಾವಿರ ರೂಪಾಯಿಗಳನ್ನು ಮುಂಗಡವಾಗಿ ನೀಡಿದರು. ಹಣ ಪಡೆದ ನಂತರ ಅಟೋ ಚಾಲಕ ಇಬ್ಬರನ್ನು ಬಾಲಕಿ ವಾಸವಾಗಿರುವ ಆರು ಅಂತಸ್ತಿನ  ಪ್ಯಾಲೆಸ್‌ಗೆ ಕರೆದುಕೊಂಡು ಹೋಗಿ ಬಾಲಕಿಯ ತಾಯಿಯನ್ನು ಭೇಟಿ ಮಾಡಿಸಿದ.
 
13 ವರ್ಷ ವಯಸ್ಸಿನ ಪುತ್ರಿಯನ್ನು ಇವತ್ತು ಕರೆದುಕೊಂಡು ಹೋಗಿ ನಾಳೆ ಮನೆಗೆ ತಂದುಬಿಡಬೇಕು. ಉಳಿದ 90 ಸಾವಿರ ರೂಪಾಯಿಗಳನ್ನು ಪಾವತಿಸುವಂತೆ ಬಾಲಕಿಯ ತಾಯಿ ಒತ್ತಾಯಿಸಿದ್ದಾಳೆ. ಸಾಮಾಜಿಕ ಕಾರ್ಯಕರ್ತ ಕೂಡಲೇ ಪೊಲೀಸರಿಗೆ ಕರೆ ಮಾಡಿದಾಗ ಹತ್ತಿರದಲ್ಲೇ ಇದ್ದ ಪೊಲೀಸ್ ತಂಡ ಅಟೋ ಚಾಲಕ ಮತ್ತು ಬಾಲಕಿಯ ತಾಯಿಯನ್ನು ವಶಕ್ಕೆ ತೆಗೆದುಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ