ರಂಜಾನ್ ಸಂದರ್ಭದಲ್ಲಿ ಸಂಗೀತ ನಿಷೇಧ !

ಬುಧವಾರ, 5 ಏಪ್ರಿಲ್ 2023 (07:21 IST)
ಕಾಬೂಲ್ : ಇತ್ತೀಚೆಗೆ ರಂಜಾನ್ ಸಮಯದಲ್ಲಿ ಸಂಗೀತಗಳನ್ನು ಪ್ರಸಾರ ಮಾಡುವ ಮೂಲಕ ರೇಡಿಯೋ ಸ್ಟೇಷನ್ ಇಸ್ಲಾಮಿಕ್ ಎಮಿರೇಟ್ನ ಕಾನೂನುಗಳು ಮತ್ತು ನಿಬಂಧನೆಗಳನ್ನು ಹಲವಾರು ಬಾರಿ ಉಲ್ಲಂಘಿಸಿದೆ.
 
ಈ ಉಲ್ಲಂಘನೆಯ ಕಾರಣದಿಂದ ರೇಡಿಯೋ ಕೇಂದ್ರವನ್ನು ಮುಚ್ಚಲಾಗಿದೆ ಎಂದು ಬಡಾಕ್ಷನ್ ಪ್ರಾಂತ್ಯದ ಮಾಹಿತಿ ಮತ್ತು ಸಂಸ್ಕೃತಿಯ ನಿರ್ದೇಶಕ ಮೊಯೆಜುದ್ದೀನ್ ಅಹ್ಮದಿ ಹೇಳಿದ್ದಾರೆ. 
ಈ ರೇಡಿಯೋ ಸ್ಟೇಷನ್ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ನೀತಿಯನ್ನು ಒಪ್ಪಿಕೊಂಡರೆ ಮತ್ತು ಅಂತಹದನ್ನು ಮತ್ತೆ ಪುನರಾವರ್ತಿಸುವುದಿಲ್ಲ ಎಂಬುದನ್ನು ಖಚಿತಪಡಿಸಿದರೆ ನಾವು ಅದನ್ನು ಮತ್ತೆ ಕಾರ್ಯನಿರ್ವಹಿಸಲು ಅನುಮತಿಸುತ್ತೇವೆ ಎಂದು ಅಹ್ಮದಿ ತಿಳಿಸಿದ್ದಾರೆ.

ಈ ನಡುವೆ ರೇಡಿಯೋ ಸ್ಟೇಷನ್ನ ಮುಖ್ಯಸ್ಥರು ಇಸ್ಲಾಮಿಕ್ ಕಾನೂನನ್ನು ಉಲ್ಲಂಘಿಸಿದ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ರೇಡಿಯೋ ಸ್ಟೇಷನ್ ಅನ್ನು ಮುಚ್ಚುವ ಅಗತ್ಯವೇ ಇರಲಿಲ್ಲ. ನಾವು ಸಂಗೀತವನ್ನು ಪ್ರಸಾರ ಮಾಡಿರುವುದಾಗಿ ತಾಲಿಬಾನ್ ಹೇಳಿದೆ. ಆದರೆ ನಾವು ಯಾವುದೇ ರೀತಿಯ ಸಂಗೀತವನ್ನು ಪ್ರಸಾರ ಮಾಡಿಲ್ಲ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ