ರಾಷ್ಟ್ರಗಳು ಅಮೆರಿಕ ಅವಲಂಬನೆ ಬಿಡಬೇಕು : ಎಮ್ಯಾನುಯೆಲ್ ಮ್ಯಾಕ್ರನ್

ಮಂಗಳವಾರ, 11 ಏಪ್ರಿಲ್ 2023 (10:55 IST)
ಪ್ಯಾರಿಸ್ : ಯುರೋಪ್ ರಾಷ್ಟ್ರಗಳು ಅಮೆರಿಕದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಬೇಕು. ಹಾಗೂ ತೈವಾನ್ ಬಗ್ಗೆ ಚೀನಾ ಮತ್ತು ಯುಎಸ್ ನಡುವಿನ ಘರ್ಷಣೆಗೆ ತಲೆ ಹಾಕಬಾರದು ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.
 
ಚೀನಾಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡು ಹಿಂದಿರುಗುವ ವೇಳೆ ವಿಮಾನದಲ್ಲಿ ನಡೆಸಿದ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಜೊತೆ ಆರು ಗಂಟೆಗಳ ಕಾಲ ಇದ್ದರು. ಪ್ರವಾಸ ಮುಗಿಸಿ ಹಿಂದಿರುಗುವಾಗ ಇಬ್ಬರು ಫ್ರೆಂಚ್ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಮ್ಯಾಕ್ರನ್ ಯುರೋಪ್ಗೆ ಸ್ವಾಯತ್ತತೆಯನ್ನು ಒತ್ತಿಹೇಳಿದರು.

ಯುರೋಪ್ ಎದುರಿಸುತ್ತಿರುವ ದೊಡ್ಡ ಅಪಾಯವೆಂದರೆ ಅದು ತಮ್ಮದಲ್ಲದ ಬಿಕ್ಕಟ್ಟುಗಳಲ್ಲಿ ಸಿಲುಕಿಕೊಳ್ಳುವುದು. ಅದು ಸ್ವಾಯತ್ತತೆಯನ್ನು ನಿರ್ಮಾಣವನ್ನು ತಡೆಯುತ್ತದೆ. ಕ್ಸಿ ಜಿನ್ಪಿಂಗ್ ಮತ್ತು ಚೀನಿ ಕಮ್ಯುನಿಸ್ಟ್ ಪಕ್ಷವು ಸ್ವಾಯತ್ತತೆಯ ಪರಿಕಲ್ಪನೆಯನ್ನು ಉತ್ಸಾಹದಿಂದ ಅನುಮೋದಿಸಿದ್ದಾರೆ. ಚೀನಿ ಅಧಿಕಾರಿಗಳು ಯುರೋಪಿಯನ್ ದೇಶಗಳೊಂದಿಗಿನ ತಮ್ಮ ವ್ಯವಹಾರಗಳಲ್ಲಿ ಇದನ್ನು ನಿರಂತರವಾಗಿ ಉಲ್ಲೇಖಿಸುತ್ತಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ