ಚೀನಾದ ಹಾದಿಯಲ್ಲಿ ನೇಪಾಳ: ವಿವಾದಿತ ಪ್ರದೇಶದಲ್ಲಿ ಸೇನೆ ನಿಯೋಜನೆ

ಶನಿವಾರ, 20 ಜೂನ್ 2020 (08:42 IST)
ನವದೆಹಲಿ: ವಿವಾದಿತ ನಕ್ಷೆಗೆ ಸಂಸತ್ತಿನಲ್ಲಿ ಅನುಮೋದನೆ ಪಡೆಯುತ್ತಿದ್ದಂತೇ ನೇಪಾಳ ಭಾರತದ ಗಡಿಯಲ್ಲಿ ಸೇನಾ ಬ್ಯಾರಕ್ ಗಳನ್ನು ನಿರ್ಮಿಸಿ ಉದ್ಧಟತನ ಮೆರೆದಿದೆ.

 

ವಿವಾದಿತ ಪ್ರದೇಶವಾಗಿರುವ ಕಾಲಪಾನಿ ಬಳಿ ನೇಪಾಳ ಸೇನೆ ಬೀಡುಬಿಟ್ಟಿದೆ. ಇದು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಇತ್ತ ಚೀನಾ ಲಡಾಖ್ ಗಡಿಯಲ್ಲಿ ಕಿರಿಕ್ ತೆಗೆದರೆ ಅತ್ತ ನೇಪಾಳ ಮತ್ತೊಂದೆಡೆ ತಗಾದೆ ತೆಗೆಯುತ್ತಿರುವುದು ಭಾರತಕ್ಕೆ ತಲೆನೋವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ