ಹೇಗಿದೆ ನೋಡಿ ಮುದ್ದು ನಾಯಿಗಳ ಬ್ಯಾಗ್ ಜರ್ನಿ: ನೀವೂ ಟ್ರೈ ಮಾಡಿ..

ಶುಕ್ರವಾರ, 9 ಜೂನ್ 2017 (12:37 IST)
ನ್ಯೂಯಾರ್ಕ್: ನೀವು ಎಲ್ಲಿಯಾದರೂ ಹೋಗಬೇಕೆಂದರೆ ನಿಮ್ಮ ಮುದ್ದಿನ ನಾಯಿಯನ್ನು ಮನೆಯಲ್ಲಿ ಬಿಟ್ಟುಹೋಗಲು ಸಂಕಟವಾಗತ್ತೆ ಅಲ್ವಾ..? ಆದರೆ ಅದನ್ನು ನಮ್ಮ ಜತೆ ಹೋದಲ್ಲೆಲ್ಲ ಕೊಂಡೊಯ್ಯುದು ಹೇಗೆ ಸಾಧ್ಯ ಎಂಬ ಪ್ರಶ್ನೆನೂ ಮೂಡತ್ತೆ.. ಇಂತ ಸಮಸ್ಯೆಗೆ ನ್ಯೂಯಾರ್ಕ್ ನ ಜನತೆ ಒಂದು ಸ್ಮಾರ್ಟ್ ಪರಿಹಾರನ ಕಂಡುಕೊಂಡಿದ್ದಾರೆ ನೋಡಿ.. 
 
ನ್ಯೂಯಾರ್ಕ್ ನಗರದ ಜನರು ತಮ್ಮ ಮುದ್ದಿನ ನಾಯಿಗಾಗಿಯೇ ಚೀಲಗಳನ್ನು ಇರಿಸಿಕೊಂಡಿರುತ್ತಾರೆ. ಅಗತ್ಯ ಬಿದ್ದಾಗ ಆ ಚೀಲದಲ್ಲಿ ತಮ್ಮ ನಾಯಿಯನ್ನು ಇರಿಸಿ ನ್ಯೂಯಾರ್ಕ್‌ ಸಬ್‌ ಅರ್ಬನ್‌ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಈ ಮೂಲಕ ತಮ್ಮ ಜತೆ ತಮ್ಮ ಮುದ್ದು ನಾಯಿಗಳನ್ನೂ ಜತೆಯಲ್ಲೇ ಕರೆದುಕೊಮ್ದು ಓದಾಡುತ್ತಾರೆ.
 
ನಾಯಿಯನ್ನು ಹೀಗೆ ಚೀಲದಲ್ಲಿ ಇರಿಸಿಕೊಂಡು ಹೋಗಲು ಕಾರಣ ಇತ್ತೀಚೆಗೆ ನ್ಯೂಯಾರ್ಕ್‌ ಸಬ್‌ವೇ ರೈಲುಗಳಲ್ಲಿ ನಾಯಿಗಳಿಗೆ ನಿಷೇಧ ಹೇರಲಾಯಿತು. ಇದಕ್ಕಾಗಿ ಅಲ್ಲಿಯ ಜನರು ಹೀಗೆ ನಾಯಿಗಾಗಿಯೇ ಒಂದು ಬ್ಯಾಗ್ ನ್ನು ಇರಿಸಿಕೊಂಡು ಅದರಲ್ಲಿ ತುಂಬಿಕೊಂಡು ಹೋಗುವ ಮಾರ್ಗವನ್ನು ಕಂಡುಕೊಂಡರು. ಈ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 

ವೆಬ್ದುನಿಯಾವನ್ನು ಓದಿ