ತ್ಸುನಾಮಿ ಭೀತಿ: ಕಡಲ ತಡಿಯ ಜನರ ಸ್ಥಳಾಂತರ

ಸೋಮವಾರ, 14 ನವೆಂಬರ್ 2016 (09:31 IST)
ನ್ಯೂಜಿಲ್ಯಾಂಡ್: ಡುನೆದಿನ್ ಮತ್ತು ವೆಲ್ಲಿಂಗ್ಟನ್'ನ ಉತ್ತರ-ದಕ್ಷಿಣ ಭಾಗದಲ್ಲಿ  ಪ್ರಬಲ ಭೂಕಂಪನದ ವರದಿಯಾಗಿದೆ.
ಕ್ರೈಸ್ತ ಚರ್ಚ್ ಸನಿಹದ ಸಾಗರದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಕ್ರೈಸ್ತ ಚರ್ಚ್'ನಿಂದ 57 ಮೈಲಿ ದೂರದ ಸಾಗರದಲ್ಲಿ ಕಂಪನ ಕೆಂದ್ರ ದಾಖಲಾಗಿದ್ದು ಪತ್ತೆಯಾಗಿದೆ. ಬೃಹದಾಕಾರದ ಅಲೆಗಳು ಮೇಲಿಂದ ಮೇಲೆ ಏಳುತ್ತಿದ್ದು, ಮುನ್ನೆಚ್ವರಿಕೆ ಕ್ರಮವಾಗಿ ಕಡಲ ತಡಿಯ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ, ಕಡಲ ತಡಿಯಲ್ಲಿ ತ್ಸುನಾಮಿ ಎಚ್ಚರಿಕೆ ನೀಡಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
 
2011ರಲ್ಲಿ ಪೂರ್ವ ಕರಾವಳಿಯಲ್ಲಿ ಸಂಭವಿಸಿದ ಭೂಕಂಪನದಿಂದ 185 ಮಂದಿ ಸಾವಿಗೀಡಾಗಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ