ಬೆಂಗಳೂರಿನಲ್ಲಿ ಕಂಠ ಪೂರ್ತಿ ಕುಡಿದ ನೈಜೀರಿಯನ್ ಮಹಿಳೆಯ ವಿಚಿತ್ರ ವರ್ತನೆ

ಸೋಮವಾರ, 27 ಜೂನ್ 2016 (19:32 IST)
ಕಂಠ ಪೂರ್ತಿ ಕುಡಿದ ನೈಜಿರಿಯನ್ ಮಹಿಳೆಯ ದುವರ್ತನೆ ತೋರಿದ ಘಟನೆ ನ್ಯಾಷನಲ್ ಮಾರುಕಟ್ಟೆ ಮತ್ತು ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.
 
ಬೆಂಗಳೂರು: ಪಾನಮತ್ತಳಾಗಿ ನಿಯಂತ್ರಣ ಕಳೆದುಕೊಂಡಿದ್ದ ನೈಜೇರಿಯಾ ಮೂಲದ ಯುವತಿಯೊಬ್ಬಳು ಇಂದು ನಗರದ ಕೆ.ಸಿ.ಆಸ್ಪತ್ರೆ ಮತ್ತು ನ್ಯಾಷನಲ್ ಮಾರುಕಟ್ಟೆ ಬಳಿ ಕೋಲಾಹಲ ಮೆರೆದಿದ್ದಲ್ಲದೇ ಪೊಲೀಸರನ್ನೇ ಓಡಿಸುವಲ್ಲಿ ಯಶಸ್ವಿಯಾಗಿದ್ದಾಳೆ.
 
ಮದ್ಯ ಸೇವಿಸಿದ ಮತ್ತಿನಲ್ಲಿ ಮನಬಂದಂತೆ ವರ್ತಿಸುವುದಲ್ಲದೇ ಹಲವರನ್ನು ಥಳಿಸಲು ಪ್ರಯತ್ನಿಸಿದ್ದಾಳೆ. ಹಲವರನ್ನು ಪರಚಿ ಗಾಯಗೊಳಿಸಿದ್ದಾಳೆ. ಪೊಲೀಸರು ಆಕೆಯನ್ನು ಹಿಡಿಯಲು ಬಂದಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. 
 
ಪೊಲೀಸರು ತನ್ನನ್ನು ಹಿಡಿಯಲು ಬರುತ್ತಿರುವುದು ಕಂಡ ಮಹಿಳೆ ಮಾರಿಯಾ, ಅವರನ್ನೇ ಹಿಡಿಯಲು ಪ್ರಯತ್ನಿಸಿದಾಗ ಪೊಲೀಸರೇ ದಿಕ್ಕು ಪಾಲಾಗಿ ಓಡಿಹೋಗಿದ್ದಾರೆ.  
 
ಉಪ್ಪಾರಪೇಟೆ ಪೊಲೀಸರಿಂದ ಮಾರಿಯಾಳನ್ನು ಹಿಡಿಯಲು ಸಾಧ್ಯವಾಗದೆ, ಮಲ್ಲೇಶ್ವರಂ ಠಾಣೆಯ ಪೊಲೀಸ್ ಸಿಬ್ಬಂದಿಯನ್ನು ಕೂಡಾ ಕರೆಸಿಕೊಂಡು  ಮಾರಿಯಾಳನ್ನು ನಿಯಂತ್ರಿಸಲು ಹರಸಾಹಸ ಪಡಲಾಗಿದೆ. 
 
ಕೊನೆಗೆ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಹಿಂದಿನಿಂದ ಮಾರಿಯಾಳ ಮೇಲೆ ಬಟ್ಟೆ ಹಾಕಿ ಬಂಧಿಸಿ ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ