ಭಾರತದ ತಾಳ್ಮೆಯನ್ನು ಪರೀಕ್ಷಿಸಬೇಡಿ: ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ

ಬುಧವಾರ, 28 ಸೆಪ್ಟಂಬರ್ 2016 (15:17 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಕೈಜೋಡಿಸಿ ಅವರ ಸಹಕಾರ ನೀತಿಯನ್ನು ಒಂದು ವೇಳೆ ಪಾಕಿಸ್ತಾನ ತಿರಸ್ಕರಿಸಿದಲ್ಲಿ ಮುಂಬರುವ ವರ್ಷಗಳಲ್ಲಿ ಅತ್ಯಂತ ಕೀಳು ದರ್ಜೆಯ ರಾಷ್ಟ್ರವಾಗಬೇಕಾಗುತ್ತದೆ ಎಂದು ಅಮೆರಿಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
 
ಭಾರತದ ತಾಳ್ಮೆ ದೀರ್ಘಾವಧಿಯವರೆಗೆ ಇರುತ್ತದೆ ಎಂದು ಭಾವಿಸಬೇಡಿ. ಒಂದು ವೇಳೆ ಮೋದಿಯವರ ಸಹಕಾರ ಒಪ್ಪಂದವನ್ನು ತಿರಸ್ಕರಿಸಿದಲ್ಲಿ ಹೀನಾಯ ಸ್ಥಿತಿಗೆ ತಲುಪಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ. 
 
ಒಂದು ವೇಳೆ, ಪಾಕಿಸ್ತಾನದ ಸೇನೆ ಉಗ್ರರನ್ನು ಭಾರತದೊಳಗೆ ನಿರಂತರಕವಾಗಿ ನುಸುಳಿಸಲು ಯತ್ನಿಸಿದಲ್ಲಿ ಭಾರತದ ಪ್ರಧಾನಮಂತ್ರಿಗೆ ತಿರುಗೇಟು ನೀಡುವ ಹಕ್ಕಿದೆ ಎಂದು ಎಚ್ಚರಿಸಿದೆ. 
 
ಪಾಕಿಸ್ತಾನ ನಿರಂತರವಾಗಿ ಭಾರತದಲ್ಲಿ ಉಗ್ರ ದಾಳಿಗಳನ್ನು ನಡೆಸುತ್ತಿದ್ದರು ಭಾರತ ತುಂಬಾ ಔದಾರ್ಯತೆಯನ್ನು ಮೆರೆದಿದೆ. ಆದರೆ, ಸದಾ ಕಾಲ ಔದಾರ್ಯ ಮೆರೆಯುತ್ತದೆ ಎಂದ ಭಾವಿಸಬೇಕಾಗಿಲ್ಲ. ತಿರುಗೇಟು ನೀಡುವ ಸಾಮರ್ಥ್ಯವೂ ಭಾರತಕ್ಕಿದೆ ಎಂದು ಖಡಕ್ ಹೇಳಿಕೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ