ಭಾರತೀಯ ಯೋಧರ ಶಿರಚ್ಛೇದ ಪ್ರಕರಣ: ಅರುಣ್ ಜೇಟ್ಲಿ ಕೆಂಡಾಮಂಡಲ
ಸೋಮವಾರ, 1 ಮೇ 2017 (19:28 IST)
ನವದೆಹಲಿ: ಭಾರತೀಯ ಯೋಧರ ಶಿರಚ್ಛೇದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಕೆಂಡಾ ಮಂಡಲರಾಗಿದ್ದಾರೆ. ಘಟನೆ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪಾಕ್ ಸೇನೆ ಇಬ್ಬರು ಭಾರತೀಯ ಯೋಧರ ಹತ್ಯೆ ಮಾಡಿ ಶಿರಚ್ಛೇದ ಮಾಡಿ ಕ್ರೌರ್ಯ ಮೆರೆದಿತ್ತು.
ಇಂದು ಬೆಳಗ್ಗೆ 8.30 ರ ಸುಮಾರಿಗೆ ಗಡಿ ನಿಯಂತ್ರಣ ರೇಖೆ ನಿಯಮ ಉಲ್ಲಂಘಿಸಿ ಪಾಕ್ ಈ ಕೃತ್ಯವೆಸಗಿದೆ ಎಂದು ಭಾರತೀಯ ಸೇನೆ ಆರೋಪಿಸಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಅರುಣ್ ಜೇಟ್ಲಿ ಯೋಧರ ಬಲಿದಾನವನ್ನು ಸುಮ್ಮನೇ ವ್ಯರ್ಥ ಮಾಡಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಸೇನೆಯ ಬಲಿದಾನಕ್ಕೆ ಪಾಕ್ ತಕ್ಕ ಪ್ರತಿಫಲ ತೆರಬೇಕಾಗುತ್ತದೆ. ಇಂತಹ ನಾಚಿಕೆಗೇಡಿನ ಕೃತ್ಯವನ್ನು ಯುದ್ಧದಲ್ಲೂ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಳಿಯಲ್ಲಿ ಇನ್ನೊಬ್ಬ ಬಿಎಸ್ಎಫ್ ಯೋಧನಿಗೆ ಗಾಯವಾಗಿದೆ. ಗಡಿ ಭದ್ರತಾ ಪಡೆಗಳೂ ಪಾಕ್ ದಾಳಿಗೆ ತಕ್ಕ ಎದಿರೇಟು ನೀಡಿದ್ದಾರೆ ಎಂದು ಸೇನೆ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ