ನೇಪಾಳ ಪ್ರಧಾನಿಯನ್ನು ಭಾರತ ವಿರುದ್ಧ ಛೂ ಬಿಡಲು ಚೀನಾ ಜತೆ ಕೈ ಜೋಡಿಸಿದ ಪಾಕ್ ಪ್ರಧಾನಿ

ಗುರುವಾರ, 2 ಜುಲೈ 2020 (09:29 IST)
ನವದೆಹಲಿ: ಭಾರತಕ್ಕೆ ಈಗ ದುಷ್ಮನ್ ಕಹಾ ಹೇ ಎಂದರೆ ಬಗಲ್ ಮೇ ಹೇ ಎನ್ನುವ ಸ್ಥಿತಿ. ಅತ್ತ ಚೀನಾ ಇತ್ತ ಪಾಕಿಸ್ತಾನ.. ಅದರ ಜತೆಗೀಗ ನೇಪಾಳವೂ ಭಾರತದ ವಿರುದ್ಧ ಕೆಟ್ಟ ಕಣ್ಣು ಹಾಕಿದೆ.


ನೇಪಾಳವನ್ನು ಭಾರತದ ವಿರುದ್ಧ ಎತ್ತಿಕಟ್ಟಿದ್ದು ಚೀನಾ. ಇದೀಗ ನೇಪಾಳ ಪ್ರಧಾನಿ ಕೆಪಿ ಒಲಿ ವಿರುದ್ಧ ಸ್ವಪಕ್ಷೀಯರೇ ಆಕ್ಷೇಪವೆತ್ತಿದ್ದಾರೆ. ಜತೆಗೆ ಅವರನ್ನು ಪದಚ್ಯುತಿಗೊಳಿಸಲು ಪಟ್ಟು ಹಿಡಿದಿದ್ದಾರೆ.

ಈ ನಡುವೆ ಒಲಿ ಬೆಂಬಲಿಸುತ್ತಿರುವ ಚೀನಾಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡಾ ಕೈ ಜೋಡಿಸಿದ್ದಾರೆ. ಕೆಪಿ ಒಲಿ ಪದಚ್ಯುತಿಗೆ ಅವರ ಪಕ್ಷದವರೇ ಒತ್ತಾಯಿಸುತ್ತಿದ್ದರೆ, ಇತ್ತ ಪಾಕ್ ಪ್ರಧಾನಿ ಒಲಿ ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಆ ಮೂಲಕ ಭಾರತ ವಿರೋಧಿ ಧೋರಣೆ ಹೊಂದಿರುವ ಕೆಪಿ ಒಲಿಯನ್ನು ಚೀನಾ ಮತ್ತು ಪಾಕ್ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಕೆ ಮಾಡುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ