ಮುಖವಸ್ತ್ರ ತೆಗಿ, ಇಲ್ಲಾಂದ್ರೆ ಕೆಲಸಕ್ಕೇ ಬರಬೇಡ ಎಂದು ಪಾಕ್ ಮಹಿಳೆಗೆ ಹುಕುಂ ಹೊರಡಿಸಿದ ಅಧಿಕಾರಿ

ಶನಿವಾರ, 20 ಅಕ್ಟೋಬರ್ 2018 (10:30 IST)
ಇಸ್ಲಾಮಾಬಾದ್: ಮುಸ್ಲಿಂ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲೇ ಮಹಿಳೆಯೊಬ್ಬರಿಗೆ ಮುಖವಸ್ತ್ರ ತೆಗೆದು ಕೆಲಸಕ್ಕೆ ಬರಬೇಕು ಇಲ್ಲಾಂದ್ರೆ ಕೆಲಸಕ್ಕೇ ರಾಜೀನಾಮೆ ನೀಡು ಎಂದು ಅಧಿಕಾರಿಯೊಬ್ಬರು ಆದೇಶ ಹೊರಡಿಸಿದ ಘಟನೆ ನಡೆದಿದೆ.
 

ಇದೀಗ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿದೆ. ಈ ಘಟನೆಯಿಂದ ಬೇಸತ್ತು ಕಂಪನಿಯ ಸಿಇಒ ಜವ್ವಾದ್ ಖಾದಿರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮ್ಯಾನೇಜರ್ ಆದೇಶದಿಂದಾಗಿ ಮಹಿಳೆ ಕೆಲಸಕ್ಕೆ ರಾಜೀನಾಮೆ ನೀಡಿದ್ದರೂ ಇದೀಗ ಸಿಇಒ ಕ್ಷಮಾಪಣೆಯ ನಂತರ ರಾಜೀನಾಮೆ ಹಿಂಪಡೆದಿದ್ದಾಳೆ ಎನ್ನಲಾಗಿದೆ. ಮುಖವಸ್ತ್ರ ಧರಿಸಿ ಬರುವುದು ಕಂಪನಿಗೆ ಅವಮಾನ ಎಂದು ತಮ್ಮ ಸಂಸ್ಥೆಯ ಮ್ಯಾನೇಜರ್ ಮಹಿಳೆಗೆ ಹೇಳಿರುವುದು ನಿಜಕ್ಕೂ ಖೇದಕರ. ಇದರ ಜವಾಬ್ಧಾರಿ ಹೊತ್ತು, ತಾವೇ ಕೆಲಸಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಖಾದಿರ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ