ವಿಶ್ವಸಂಸ್ಥೆಯ ನವಾಜ್ ಷರೀಫ್ ಭಾಷಣಕ್ಕೆ ಛೀಮಾರಿ ಹಾಕಿದ ಪಾಕ್ ಸಂಸತ್ತು
ಶುಕ್ರವಾರ, 23 ಸೆಪ್ಟಂಬರ್ 2016 (19:10 IST)
ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಿಂದ ಪಾಕ್ ವಿಶ್ವ ಸಮುದಾಯದಲ್ಲಿ ಏಕಾಂಗಿಯಾಗಿದೆ ಎಂದು ಪಾಕಿಸ್ತಾನದ ವಿಪಕ್ಷ ನಾಯಕ ವಾಗ್ದಾಳಿ ನಡೆಸಿದ್ದಾರೆ.
ಪಾಕಿಸ್ತಾನ ಲೋಕಸಭೆಯ ವಿಪಕ್ಷ ನಾಯಕ ಸಯೀದ್ ಖುರೇಶಿ ಶಾಹ್ ಮಾತನಾಡಿ, ವಿದೇಶಾಂಗ ಇಲಾಖೆಯ ಅಧಿಕಾರಿಗಳ ಸಲಹೆ ಪಡೆದು ಪ್ರಧಾನಿ ಷರೀಫ್ ಮಾಡಿದ ಭಾಷಣದಿಂದ ಪಾಕ್ ಏಕಾಂಗಿಯಾಗಿದೆಯಲ್ಲದೇ ನೆರೆಹೊರೆಯ ರಾಷ್ಟ್ರಗಳೊಂದಿಗೆ ಉತ್ತಮ ಭಾಂದವ್ಯ ಹೊಂದಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮಾಡಿದ ಭಾಷಣ ತುಂಬಾ ಸಾಮಾನ್ಯವಾಗಿತ್ತು. ಯಾಕೆಂದರೆ, ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಯಾವುದೇ ಹೇಳಿಕೆಗಳಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಷರೀಫ್ ಸಾಮಾನ್ಯ ಭಾಷಣ ಮಾಡುವುದಕ್ಕಿಂತ ಭಾರತದಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬಹುದಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಮಂತ್ರಿ ನವಾಜ್ ಷರೀಫ್ ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ವಿದೇಶಾಂಗ ವ್ಯವಹಾರಗಳ ಸಲಹೆಗಾರರಾದ ಸರ್ತಾಜ್ ಅಜೀಜ್‌ರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂದು ಪಾಕಿಸ್ತಾನ ಲೋಕಸಭೆಯ ವಿಪಕ್ಷ ನಾಯಕ ಸಯೀದ್ ಖುರೇಶಿ ಶಾಹ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ