ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ಹೊಗಳು ಭಟ್ಟನಾದ ಪಾಕಿಸ್ತಾನ ಪ್ರಧಾನಿ ಶೆಹಬಾಜ್

Krishnaveni K

ಶನಿವಾರ, 27 ಸೆಪ್ಟಂಬರ್ 2025 (09:13 IST)
Photo Credit: X
ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮಾತುಗಳನ್ನು ಕೇಳಿದರೆ ಅವರು ಪಾಕ್ ಪ್ರಧಾನಿಯೋ ಡೊನಾಲ್ಡ್ ಟ್ರಂಪ್ ಹೊಗಳು ಭಟ್ಟನೋ ಎನ್ನುವಂತಿತ್ತು.

ನಿನ್ನೆ ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಶೆಹಬಾಜ್ ಷರೀಫ್ ಭಾಷಣದುದ್ದಕ್ಕೂ ಟ್ರಂಪ್ ಗುಣಗಾನ ಮಾಡಿದ್ದಾರೆ. ಟ್ರಂಪ್ ಶಾಂತಿ ದೂತ. ಕಳೆದ ಮೇನಲ್ಲಿ ಭಾರತದೊಂದಿಗಿನ ಸಂಘರ್ಷವನ್ನು ನಿಲ್ಲಿಸುವಲ್ಲಿ ಅವರು ಪ್ರಧಾನ ಪಾತ್ರ ವಹಿಸಿದ್ದಾರೆ ಎಂದೆಲ್ಲಾ ಟ್ರಂಪ್ ಗುಣಗಾನ ಮಾಡಿದ್ದಾರೆ.

ಅಷ್ಟೇ ಅಲ್ಲ, ಟ್ರಂಪ್ ಮಹಾನ್ ಶಾಂತಿ ದೂತ. ವಿಶ್ವ ಶಾಂತಿಗಾಗಿ ಪ್ರಯತ್ನಿಸಿದ ಅವರಿಗೆ ನೊಬೆಲ್ ಪ್ರಶಸ್ತಿ ಸಿಗಬೇಕು ಎಂದೂ ಹೇಳಿದ್ದಾರೆ. ಟ್ರಂಪ್ ಅವರ ಪರಿಣಾಮಕಾರೀ ವ್ಯಕ್ತಿತ್ವ ಮತ್ತು ನಾಯಕತ್ವ ಗುಣದಿಂದ ನಮಗೆ ಕದನ ವಿರಾಮ ಘೋಷಿಸಲು ಸಾಧ್ಯವಾಯಿತು.

ಅವರಿಗೆ ನಾವು ಯಾವತ್ತೂ ಅಭಾರಿಯಾಗಿರುತ್ತೇವೆ. ಶಾಂತಿಗಾಗಿ ಅವರ ಪ್ರಯತ್ನವನ್ನು ಮನ್ನಿಸಿ ಪಾಕಿಸ್ತಾನ ಅವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕೆಂದು ನಾಮಿನೇಟ್ ಮಾಡಿತ್ತು. ಇಂಥಾ ಶಾಂತಿ ಪ್ರಿಯನಿಗೆ ನಾವು ಮಾಡಬಹುದಾದ ಕನಿಷ್ಠ ಕೆಲಸ ಇದಾಗಿತ್ತು ಎಂದು ಟ್ರಂಪ್ ರನ್ನು ಹೊಗಳಿ ಹೊನ್ನ ಶೂಲಕ್ಕೇರಿಸಿದ್ದಾರೆ. ಇದಕ್ಕೆ ಮೊದಲು ಶ್ವೇತಭವನದಲ್ಲಿ ಶೆಹಬಾಜ್ ಮತ್ತು ಸೇನಾ ಮುಖ್ಯಸ್ಥ ಆಸಿಮ್ ಮುನೀರ್, ಡೊನಾಲ್ಡ್ ಟ್ರಂಪ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ