ಲಂಡನ್: ಅಮೆರಿಕಾದ ಧ್ವೇಷ ಕಟ್ಟಿಕೊಂಡಿರುವ ಉತ್ತರ ಕೊರಿಯಾ ವಿರುದ್ಧ ಯುದ್ಧಕ್ಕೆ ಇದೀಗ ಬ್ರಿಟನ್ ಕೂಡಾ ಸದ್ದಿಲ್ಲದೇ ತಯಾರಿ ನಡೆಸುತ್ತಿದೆ. ಇದರಿಂದಾಗಿ ಮತ್ತೊಂದು ಜಾಗತಿಕ ಯುದ್ಧದ ಕಾರ್ಮೋಡ ಕವಿದಂತಾಗಿದೆ.
ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಎದುರು ಹಾಕಿಕೊಂಡು ಪರಮಾಣು, ಕ್ಷಿಪಣಿ ಪರೀಕ್ಷೆ ನಡೆಸುತ್ತಿರುವ ಉತ್ತರ ಕೊರಿಯಾ ವಿರುದ್ಧ ಯುದ್ಧಕ್ಕೆ ಸನ್ನದ್ಧರಾಗುವಂತೆ ಈಗಾಗಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದಾರೆ. ಇದೀಗ ಮಿತ್ರ ರಾಷ್ಟ್ರ ಬ್ರಿಟನ್ ಕೂಡಾ ಅಮೆರಿಕಾ ಜತೆ ಕೈ ಜೋಡಿಸುತ್ತಿದೆ.
ಬ್ರಿಟನ್ ಕೂಡಾ ರಹಸ್ಯವಾಗಿ ಯುದ್ಧಕ್ಕೆ ಸಿದ್ಧವಾಗುತ್ತಿದ್ದು, ವಿಮಾನ ವಾಹನ ನೌಕೆಯನ್ನು ಉತ್ತರ ಕೊರಿಯಾದತ್ತ ಸಜ್ಜುಗೊಳಿಸಿ ನಿಯೋಜಿಸಿದೆ. ಒಂದು ವೇಳೆ ಯುದ್ಧ ನಡೆದರೆ ಅಮೆರಿಕಾ ಜತೆ ಬ್ರಿಟನ್ ಕೂಡಾ ಕೈಜೋಡಿಸುವುದು ಖಂಡಿತಾ.
ರಾಜತಾಂತ್ರಿಕವಾಗಿ ಉತ್ತರ ಕೊರಿಯಾವನ್ನು ನಿಯಂತ್ರಿಸಲು ಸಾಧ್ಯವಾಗದೇ ಇರುವ ಹಿನ್ನಲೆಯಲ್ಲಿ ಯುದ್ಧ ಅನಿವಾರ್ಯ. ಹೀಗಾಗಿ ಕಡ್ಡಾಯವಾಗಿ ಯುದ್ಧಕ್ಕೆ ಸಿದ್ಧರಾಗುವಂತೆ ಅಮೆರಿಕಾ ರಕ್ಷಣಾ ಸಚಿವರು ಸೇನಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಆದರೆ ಅಮೆರಿಕಾ ಮತ್ತು ಉತ್ತರ ಕೊರಿಯಾಗೆ ಸಂಯಮ ಪಾಲಿಸುವಂತೆ ರಷ್ಯಾ ಮತ್ತು ಚೀನಾ ಸಲಹೆ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ