ಸಿಗರೇಟ್‌ಗಾಗಿ ಭಾರತೀಯನನ್ನು ಹತ್ಯೆಗೈದ ಅಮೆರಿಕದ ನಾಗರಿಕ

ಭಾನುವಾರ, 7 ಮೇ 2017 (12:53 IST)
ಸಿಗರೇಟು ಖರೀದಿ ಕುರಿತಂತೆ ಉಂಟಾದ ವಾಗ್ವಾದದಿಂದ ಅಮೆರಿಕದ ನಾಗರಿಕನೊಬ್ಬ ಭಾರತೀಯ ಮೂಲದ 32 ವರ್ಷ ವಯಸ್ಸಿನ ವ್ಯಕ್ತಿಯನ್ನು ಹತ್ಯೆ ಮಾಡಿರುವ ಹೇಯ ಘಟನೆ ವರದಿಯಾಗಿದೆ.
 
ಪಂಜಾಬ್‌ನ ಕಪುರ್ತಲಾದಲ್ಲಿರುವ ಹತ್ಯೆಯಾದ ವ್ಯಕ್ತಿ ಜಗ್ಜಿತ್ ಸಿಂಗ್ ಸಂಬಂಧಿಗಳ ಪ್ರಕಾರ, ಮೃತನಾಗುವ ಮುನ್ನ ಸುಮಾರು ಒಂಬತ್ತು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನೆಡೆಸಿದ್ದನು ಎಂದು ತಿಳಿಸಿದ್ದಾರೆ.
 
ಕಳೆದ ಒಂದುವರೆ ವರ್ಷದ ಹಿಂದೆ ಅಮೆರಿಕೆಗೆ ತೆರಳಿದ್ದ ಜಗ್ಜಿತ್ ಸಿಂಗ್, ನಿನ್ನೆ ರಾತ್ರಿ ಗ್ರಾಹಕನೊಬ್ಬ ಸಿಗರೇಟು ಖರೀದಿಸಲು ಬಂದಾಗ ಸಿಂಗ್, ಐಡಿ ಪ್ರೂಫ್ ಕೊಡಿ ಎಂದು ಕೇಳಿದ್ದಾನೆ. 
 
ಐಡಿ ಪ್ರೂಫ್ ಸರಿಯಾಗಿರದ ಬೇರೆ ದಾಖಲೆಗಳನ್ನು ಕೊಡುವಂತೆ ಗ್ರಾಹಕನಿಗೆ ಸಿಂಗ್ ಮನವಿ ಮಾಡಿದ್ದಾರೆ. ಗ್ರಾಹಕ ಸಿಗರೇಟು ದೊರೆಯುವುದಿಲ್ಲ ಎಂದು ಅರಿತು ಹೊರಹೋಗಿದ್ದಾನೆ. ನಂತರ ರಾತ್ರಿ 11.50 ರ ಸುಮಾರಿಗೆ ಸಿಂಗ್ ಅಂಗಡಿ ಬಂದ್ ಮಾಡುತ್ತಿರುವ ಸಂದರ್ಭದಲ್ಲಿ ಬಂದ ಗ್ರಾಹಕ ಚಾಕುವಿನಿಂದ ತಿವಿದಿದ್ದಾನೆ ಎಂದು ಜಗ್ಜಿತ್ ಸಿಂಗ್ ಸೋದರಳಿಯ ಕೆ.ಎಸ್.ಚೀಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ