ಪಾಕಿಸ್ತಾನದ ಮಧ್ಯಂತರ ಪ್ರಧಾನಿಯಾಗಿ ಶಾಹಿದ್ ಅಬ್ಬಾಸಿ

ಶನಿವಾರ, 29 ಜುಲೈ 2017 (18:21 IST)
ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶಾಹಿದ್ ಅಬ್ಬಾಸಿ ನೇಮಕಗೊಂಡಿದ್ದಾರೆ. 

ನೂತನ ಪ್ರಧಾನಿ ಶಾಹಿದ್ ಅಬ್ಬಾಸಿಯವರನ್ನು ಮಧ್ಯಂತರ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದ್ದು, 45 ದಿನಗಳ ನಂತರ ನವಾಜ್ ಷರೀಫ್ ಸಹೋದರ ಶಹಾಬಾಜ್ ಷರೀಫ್ ಪ್ರಧಾನಿಯಾಗಿ ಅಧಿಕಾರ ಅಲಂಕರಿಸಲಿದ್ದಾರೆ. 
 
ಮಾಜಿ ಪ್ರಧಾನಿ ನವಾಜ್ ಷರೀಫ್ ಸಹೋದರ ಶಹಾಬಾಜ್ ಷರೀಫ್ ಉಪಚುನಾವಣೆಯಲ್ಲಿ ಸಂಸತ್ತಿಗೆ ಆಯ್ಕೆಯಾದ ನಂತರ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಪನಾಮಾ ಪೇಪರ್ ಕೇಸ್‌ನಲ್ಲಿ ನವಾಜ್ ಷರೀಫ್‌ ಭಾರಿ ಅವ್ಯವಹಾರ ನಡೆಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸುಪ್ರೀಂಕೋರ್ಟ್ ಅನರ್ಹಗೊಳಿಸಿ ಜೀವಾವಧಿಯವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಆದೇಶ ನೀಡಿದೆ.    

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ