ಜೈಲಿನ ಮೇಲೆ ಗುಂಡಿನ ದಾಳಿ ! 24 ಕೈದಿಗಳು ಎಸ್ಕೇಪ್
ಕೈದಿಗಳ ಕುಟುಂಬದವರು ತಮ್ಮ ಸದಸ್ಯರನ್ನು ಭೇಟಿ ಮಾಡಲು ಜೈಲಿಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಂದೂಕುಧಾರಿಗಳು ಪೆನಿಟೆನ್ಷಿಯರಿ ಸೆಂಟರ್ಗೆ ವಾಹನಗಳಲ್ಲಿ ಬಂದಿದ್ದಾರೆ.
ನಂತರ ಭದ್ರತಾ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡ ಸನ್ನಿವೇಶದಲ್ಲಿ 24 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ.
ಮೆಕ್ಸಿಕನ್ ಸೈನಿಕರು ಮತ್ತು ರಾಜ್ಯ ಪೊಲೀಸರು ತಕ್ಷಣ ಜೈಲಿನ ನಿಯಂತ್ರಣ ಪಡೆದಿದ್ದಾರೆ. ದಾಳಿ ನಡೆಸಿದವರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಮೆಕ್ಸಿಕನ್ ಜೈಲುಗಳಲ್ಲಿ ಈ ಹಿಂದೆಯೂ ಹಲವಾರು ಹಿಂಸಾಚಾರದ ದಾಳಿಗಳಾಗಿವೆ.