ಬರ್ತ್‌ಡೇ ಪಾರ್ಟಿಯಲ್ಲಿ ಶೂಟೌಟ್! ಇಬ್ಬರು ಸಾವು, 6 ಮಂದಿಗೆ ಗಾಯ

ಸೋಮವಾರ, 6 ಮಾರ್ಚ್ 2023 (14:40 IST)
ಟಿಬಿಲಿಸಿ : ಜಾರ್ಜಿಯಾದ ಡೌಗ್ಲಾಸ್ ಕೌಂಟಿಯಲ್ಲಿ ಪಾರ್ಟಿ ವೇಳೆ ನಡೆದ ಗುಂಡಿನ ದಾಳಿಗೆ ಇಬ್ಬರು ಬಲಿಯಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
 
ಹೌಸ್ ಪಾರ್ಟಿಯಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ಈ ವೇಳೆ ಘರ್ಷಣೆಯಾಗಿದ್ದು, ಗುಂಡಿನ ದಾಳಿ ನಡೆದಿದೆ. ದಾಳಿ ಕುರಿತು ಜನರಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ಮನೆಯ ಮಾಲೀಕ ಪ್ರತಿಕ್ರಿಯಿಸಿ, ನಮ್ಮ ಮಗಳ ಬರ್ತ್ಡೇ ಪಾರ್ಟಿಯನ್ನು ಮನೆಯಲ್ಲಿ ಆಯೋಜಿಸಿದ್ದೆವು. ರಾತ್ರಿ 10 ಗಂಟೆಗೆ ಪಾರ್ಟಿಯನ್ನು ಕೊನೆಗೊಳಿಸಲು ನಿರ್ಧರಿಸಿದ್ದೆವು. ಪಾರ್ಟಿಯಲ್ಲಿ ಕೆಲವರು ಪಾಲ್ಗೊಂಡಿದ್ದರು. ಅವರು ಗಾಂಜಾ ಸೇದುತ್ತಿದ್ದುದು ನಮ್ಮ ಗಮನಕ್ಕೆ ಬಂದಿತ್ತು ಎಂದು ಪೊಲೀಸರಿಗೆ ವಿವರ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ