ಕಾಶ್ಮೀರದಲ್ಲಿ ಬಹುಸಂಖ್ಯಾತರನ್ನು 'ಒತ್ತೆ'' ಇರಿಸಿಕೊಂಡ ಸಣ್ಣ ಗುಂಪು: ಪರಿಕ್ಕರ್
ಗುರುವಾರ, 1 ಸೆಪ್ಟಂಬರ್ 2016 (18:54 IST)
ಹಿಂಸಾಚಾರ ಪೀಡಿತ ಕಾಶ್ಮೀರದಲ್ಲಿ ಗಡಿಯಾಚೆಗಿನ ಶಕ್ತಿಗಳು ಪ್ರಚೋದನೆ ನೀಡುತ್ತಿವೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದು, ಕಣಿವೆಯಲ್ಲಿ ಸಣ್ಣ ಶೇಕಡಾವಾರು ಜನರು ಬಹುಸಂಖ್ಯಾತರನ್ನು ''ಒತ್ತೆ''ಯಾಗಿರಿಸಿಕೊಂಡಿದ್ದಾರೆಂದು ಹೇಳಿದರು.
ರಾಜ್ಯದಲ್ಲಿ ಹಿಂಸಾಚಾರ ನಿಭಾಯಿಸಲು ಸರ್ಕಾರ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದು ಪ್ರತಿಪಾದಿಸಿದರು.
ಪರಿಕ್ಕರ್ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಶ್ಟೋನ್ ಕಾರ್ಟರ್ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಪೆಂಟಗನ್ ವರದಿಗಾರರ ಜತೆ ಮಾತನಾಡುತ್ತಿದ್ದರು.
ಕಾಶ್ಮೀರದಲ್ಲಿ ಪ್ರಸಕ್ತ ಪರಿಸ್ಥಿತಿ ಕುರಿತು ಕೇಳಿದಾಗ, ಕರ್ಫ್ಯೂವನ್ನು ತೆರವುಗೊಳಿಸಲಾಗಿದ್ದು, ಸರ್ವಪಕ್ಷಗಳ ನಿಯೋಗ ಕಣಿವೆಗೆ ತೆರಳುತ್ತಿದೆ ಎಂದು ತಿಳಿಸಿದರು. ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಸರ್ಕಾರವಿದೆ. ಮುಖ್ಯಮಂತ್ರಿ ಕಾಶ್ಮೀರ ಕಣಿವೆಯವರಾಗಿದ್ದಾರೆ ಎಂದು ಪರಿಕ್ಕರ್ ವಿವರಿಸಿದರು.