ಚೀನಾದಲ್ಲಿ ಸೂಪರ್ ಮಾರ್ಕೆಟ್​ಗಳು ಬಂದ್!

ಶನಿವಾರ, 8 ಜನವರಿ 2022 (10:29 IST)
ವಿಯೆಟ್ನಾಂ : ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಹಣ್ಣುಗಳಲ್ಲಿ ಕೊರೊನಾವೈರಸ್ ಕುರುಹುಗಳು ಕಂಡುಬಂದ ಹಿನ್ನೆಲೆಯಲ್ಲಿ ಚೀನಾದ ಅಧಿಕಾರಿಗಳು ಹಲವಾರು ಸೂಪರ್ ಮಾರ್ಕೆಟ್ಗಳನ್ನು ಬಂದ್ ಮಾಡಿದ್ದಾರೆ.

ಚೀನಾದ ಝೆಜಿಯಾಂಗ್ ಮತ್ತು ಜಿಯಾಂಗ್ಕ್ಸಿ ಪ್ರಾಂತ್ಯಗಳ ಕನಿಷ್ಠ 9 ನಗರಗಳಲ್ಲಿ ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಡ್ರ್ಯಾಗನ್ ಹಣ್ಣಿನಲ್ಲಿ ಕೊವಿಡ್ ವೈರಸ್ ಮಾದರಿಗಳು ಪತ್ತೆಯಾಗಿವೆ ಎನ್ನಲಾಗಿದೆ.

ಡಿಸೆಂಬರ್ ಕೊನೆಯ ವಾರದಲ್ಲಿ ಕೊವಿಡ್-19 ಕುರುಹುಗಳು ಪತ್ತೆಯಾಗಿದ್ದರಿಂದ ಚೀನಾ ಈ ಹಿಂದೆ ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳುವ ಡ್ರ್ಯಾಗನ್ ಹಣ್ಣಿನ ಮೇಲೆ ಜನವರಿ 26ರವರೆಗೆ ನಿಷೇಧ ಹೇರಿತ್ತು.

ಚೀನಾಕ್ಕೆ ಡ್ರ್ಯಾಗನ್ ಫ್ರೂಟ್ ಕಳುಹಿಸುವ ಲ್ಯಾಂಗ್ ಸನ್ ಪ್ರಾಂತ್ಯದ ಹುಯು ಘಿ ಬಾರ್ಡರ್ ಗೇಟ್ ಮೇಲೆ ನಿಷೇಧ ಹೇರಲಾಗಿದೆ. ಕಂಟೈನರ್ ಟ್ರಕ್‌ಗಳನ್ನು ಹಿಂದಕ್ಕೆ ಕಳುಹಿಸಿದ್ದರಿಂದ ಅಧಿಕಾರಿಗಳು ಟಾನ್ ಥಾನ್ ಎಂಬ ಮತ್ತೊಂದು ಗಡಿ ಗೇಟ್‌ನಿಂದ ಡ್ರ್ಯಾಗನ್ ಹಣ್ಣಿನ ಆಮದನ್ನು ನಿಷೇಧಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ