ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಸುಪ್ರೀಂಕೋರ್ಟ್
26 ವಾರಗಳ ಅವಧಿಯ ಗರ್ಭಪಾತಕ್ಕೆ ಅನುಮತಿ ನೀಡುವಂತೆ ವಿವಾಹಿತ ಮಹಿಳೆ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನಾವು ಜೀವವೊಂದರ ಹೃದಯ ಬಡಿತ ನಿಲ್ಲಿಸಲು ಸಾಧ್ಯವಿಲ್ಲ. ಮಹಿಳೆಯು ಗರ್ಭ ಧರಿಸಿ 26 ವಾರ 5 ದಿನ ಆಗಿದೆ. ಈ ಸಮಯದಲ್ಲಿ ಗರ್ಭಪಾತಕ್ಕೆ ಅನುಮತಿಸುವುದು ತಪ್ಪಾಗುತ್ತದೆ. ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯ ಕಾಯ್ದೆಯ ಸೆಕ್ಷನ್ 3 ಮತ್ತು 5ರ ಉಲ್ಲಂಘನೆಯಾಗುತ್ತದೆ ಅಂತಾ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಆದೆಶ ಹೊರಡಿಸಿದ್ದಾರೆ.