ಭಾರತಕ್ಕೆ ವಾಪಸ್ ಹೋಗಿ! ಟೆಕ್ಸಾಸ್ ನಲ್ಲಿ ಭಾರತೀಯರಿಗೆ ನಿಂದಿಸಿದ ಮಹಿಳೆ
ರೆಸ್ಟೋರೆಂಟ್ ಒಂದರ ಮುಂದೆ ನಿಂತಿದ್ದ ಭಾರತೀಯ ಮಹಿಳೆಯರಿಗೆ ವಿದೇಶೀ ಮಹಿಳೆ ಅವಾಚ್ಯವಾಗಿ ನಿಂದಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಮಹಿಳೆಯನ್ನು ಬಂಧಿಸಿರುವ ಪೊಲೀಸರು ಜನಾಂಗೀಯ ನಿಂದನೆ, ಬೆದರಿಕೆ, ಹಲ್ಲೆ ಕೇಸ್ ದಾಖಲಿಸಿದ್ದಾರೆ. ಈಕೆಯನ್ನು ಎಸ್ಮೆರಾಲ್ಡಾ ಆಪ್ಟನ್ ಎಂದು ಗುರುತಿಸಲಾಗಿದೆ.