ಪ್ಲೋರಿಡಾದಲ್ಲಿ ಈ ಕಾರಣದಿಂದ ಕಾಂಗರೊವನ್ನು ಬಂಧಿಸಿದ ಪೊಲೀಸರು

ಭಾನುವಾರ, 19 ಜುಲೈ 2020 (13:06 IST)
ಪ್ಲೋರಿಡಾ : ಕಾಂಗರೊವೊಂದನ್ನು ಪೊಲೀಸರು ಬಂಧಿಸಿ ಕೂಡಿ ಹಾಕಿದ ಘಟನೆ ಪ್ಲೋರಿಡಾದಲ್ಲಿ ನಡೆದಿದೆ.

ಪ್ಲೋರಿಡಾದ ಲಾಡರ್ಡೇಲ್ ನ ರಸ್ತೆಯ ಮೇಲೆ ಕಾಂಗರೊ ಒಂದು ಮನಬಂದಂತೆ ಓಡಾಡುತ್ತಿತ್ತು. ಅಲ್ಲದೇ ರಸ್ತೆ ಮೇಲೆಯೇ ಮಲಗಿಕೊಂಡು ವಾಹನ ಸವಾರರಿಗೆ ತೊಂದರೆ ನೀಡುತ್ತಿತ್ತು. ಆದ ಕಾರಣ ಅಲ್ಲಿನ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

ತಕ್ಷಣ ಅಲ್ಲಿಗೆ ಬಂದ ಪೊಲೀಸರು ಸತತ 2 ಗಂಟೆಗಳ ಕಾರ್ಯಚರಣೆಯ ಮೂಲಕ ಕಾಂಗರೊವನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯದಿದ್ದಾರೆ. ಕಾಂಗರೊ ಮಾಲೀಕ ಅದನ್ನು ವಾಪಾಸ್ ನೀಡುವಂತೆ ಮನವಿ ಮಾಡಿದ್ದರೂ ಕೂಡ ಪೊಲೀಸರು ನೀಡಲಿಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ