ಅಫ್ಘಾನಿಸ್ತಾನದಲ್ಲಿ ಅವಳಿ ಆತ್ಮಾಹುತಿ ದಾಳಿ: 60 ಮಂದಿ ಸಾವು

ಶನಿವಾರ, 23 ಜುಲೈ 2016 (16:57 IST)
ವಿದ್ಯುತ್ ತೊಂದರೆ ನಿವಾರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಅವಳಿ ಬಾಂಬ್‌ಗಳು ಸ್ಫೋಟಗೊಂಡು ಹಿನ್ನೆಲೆಯಲ್ಲಿ 60 ಮಂದಿ ಸಾವನ್ನಪ್ಪಿದ್ದು 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಸರಕಾರಿ ಮೂಲಗಳು ತಿಳಿಸಿವೆ.
 
ಸ್ಥಳೀಯ ಮಾಧ್ಯಮಗಳ ಪ್ರಕಾರ, ವಿದ್ಯುತ್ ಮಾರ್ಗ ಕುರಿತಂತೆ ಹಜಾರಾ ಸಮುದಾಯದ ಸಾವಿರಾರು ಜನರು ಇಂದು ನಗರದ ದೆಹಮಾಜಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸುತ್ತಿದ್ದಾಗ ಸ್ಫೋಟಗಳು ಸಂಭವಿಸಿವೆ ಎಂದು ವರದಿ ಮಾಡಿವೆ.
 
ವರದಿಗಳ ಪ್ರಕಾರ, ಹಜಾರಾ ಅಲ್ಪಸಂಖ್ಯಾತರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಆತ್ಮಾಹುತಿ ದಳದ ಸದಸ್ಯನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡ ಪರಿಣಾಮವಾಗಿ 60 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಬಹುಕೋಟಿ ವೆಚ್ಚದ ವಿದ್ಯುತ್ ಮಾರ್ಗವನ್ನು ಬದಲಿಸುವಂತೆ ಸರಕಾರದ ಮೇಲೆ ಒತ್ತಡ ಹೇರಲು ಹಜಾರಾ ಅಲ್ಪಸಂಖ್ಯಾತ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಜರ್ಮನಿಯಲ್ಲಿ ನಡೆದ ಉಗ್ರರ ದಾಳಿಯ ಘಟನೆ ಮಾಸುವ ಮುನ್ನವೇ ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ನಡೆದ ಆತ್ಮಾಹುತಿ ದಾಳಿ ಜನರಲ್ಲಿ ಆತಂಕ ಮೂಡಿಸಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ