30 ಅಡಿ ಎತ್ತರದ ಹಗ್ಗದ ಮೇಲೆ ನಿಂತು ಮದುವೆ( ವಿಡಿಯೋ)

ಶುಕ್ರವಾರ, 29 ಜುಲೈ 2016 (13:45 IST)
ಮದುವೆ ಅನ್ನುವುದು ಪ್ರತಿಯೊಬ್ಬರ ಜೀವನದ ಅವಿಸ್ಮರಣೀಯ ಸಂದರ್ಭ. ಆಧುನಿಕ ಕಾಲದ ಯುವಕ-ಯುವತಿಯರು ತಮ್ಮ ಮದುವೆ ವಿಭಿನ್ನವಾಗಿರಬೇಕೆಂದು ಬಯಸುತ್ತಾರೆ. ಸರ್ಕಸ್ ಕಂಪನಿಯಲ್ಲಿ ಆಕ್ರೋಬ್ಯಾಟ್‌ಗಳಾಗಿ ಕೆಲಸ ಮಾಡುವ ಮುಸ್ತಾಫಾ ಡ್ಯಾಂಗ್ಯುರ್ ಹಾಗೂ ಆ್ಯನಾ ಪರಷ್ಪರ ಪ್ರೀತಿಸಿದ್ದರು. ತಮ್ಮ ಮದುವೆ ವಿಶಿಷ್ಟವಾಗಿರಬೇಕೆಂಬುದು ಅವರ ಕನಸಾಗಿತ್ತು. ಅದನ್ನು ನನಸು ಮಾಡಿಕೊಂಡಿದ್ದಾರೆ ಸಹ.

ಅಮೆರಿಕದ ಟೆಕ್ಸಾಸ್‍ನಲ್ಲಿರುವ ಹೂಸ್ಟನ್ ನಗರದ ಎನ್‍ಜಿಆರ್ ಸ್ಟೇಡಿಯಂನಲ್ಲಿ ಮಂಗಳವಾರ ಶೋ ನೀಡುತ್ತಲೇ ಅವರಿಬ್ಬರು  30 ಅಡಿ ಎತ್ತರದ ಹಗ್ಗದ ಮೇಲೆ ನಿಂತು ವಿವಾಹವಾದರು. ಮದುವೆ ಉಡುಗೆಯಲ್ಲಿ ಮುಸ್ತಫಾ ಒಂಟೆಯ ಮೇಲೆ, ವಧು ಕುದುರೆ ಏರಿ ಬಂದು ಹಗ್ಗದ ಮೇಲೆ ನಿಂತು ಉಂಗುರ ಬದಲಾಯಿಸಿಕೊಂಡರು.

ಅಲ್ಲಿ ನೆರೆದವರು ದೊಡ್ಡದಾಗಿ ಚೀರಾಡುತ್ತ ನವದಂಪತಿಗೆ ಶುಭ ಕೋರಿದರು.

30 ಅಡಿ ಎತ್ತರದ ಹಗ್ಗದ ಮೇಲೆ ನಿಂತು ಮದುವೆ( ವಿಡಿಯೋ)

ವೆಬ್ದುನಿಯಾವನ್ನು ಓದಿ