ಅಚ್ಚರಿಯಾದ್ರೂ ಸತ್ಯ.. ಅಮೇರಿಕಾದ ಅಧ್ಯಕ್ಷ ಒಬಾಮಾ ಮಗಳು ಹೊಟೇಲ್‌ನಲ್ಲಿ ಕೆಲಸ

ಭಾನುವಾರ, 7 ಆಗಸ್ಟ್ 2016 (15:58 IST)
ಗಣ್ಯ ವ್ಯಕ್ತಿಗಳ ಮಕ್ಕಳು ಕೆಲಸ ಮಾಡೋದು ದೂರದ ಮಾತು..ದೊಡ್ಡ ಗಣ್ಯವ್ಯಕ್ತಿಗಳ ಮಕ್ಕಳು ಮನೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಾರೆ. ಆದ್ರೆ ಇದಕ್ಕೆ ಅಪವಾದ ಎಂಬಂತೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಪುತ್ರಿ ತೋರಿಸಿ ಕೊಟ್ಟಿದ್ದಾರೆ. ಇದು ಅಚ್ಚರಿಯಾದ್ರೂ ಸತ್ಯ.


ಬಲಾಡ್ಯ ರಾಷ್ಟ್ರ ಎನ್ನಿಸಿಕೊಂಡಿರುವ ಅಮೇರಿಕಾ ಅಧ್ಯಕ್ಷರ ಮಗಳು ನೈಜ ಜೀವನದ ಅನುಭವಕ್ಕಾಗಿ  ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿದ್ದಾರೆ.!
 
ಬರಾಕ್ ಒಬಾಮ್ ಮಗಳು ಸಾಶಾ ಇದೀಗ ನೈಜ ಜೀವನದ ಅನುಭವಕ್ಕಾಗಿ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಸಾಶಾಗೆ ಬೇಸಿಗೆ ರಜೆ ಇದ್ದು. ಅದಕ್ಕಾಗಿ ಆಕೆ ಹೊಸದಾಗಿ ಏನಾದರೂ ಮಾಡಲು ಬಯಸಿದ್ದಾಳೆ. ಸಾಶಾ ಆಯ್ಕೆ ಮಾಡಿಕೊಂಡಿದ್ದು ಹೊಟೇಲ್‌ನಲ್ಲಿ ಸರ್ವರ್ ಆಗಿ ಕೆಲಸವನ್ನ.
 
ಸಾಶಾ ಮುಂಜಾನೆ 4 ಗಂಟೆಗಳ ಅವಧಿ ವರೆಗೆ ಕೆಲಸ ಮಾಡುತ್ತಿದ್ದಾಳೆ. ಈಕೆ ಅಮೆರಿಕಾದ ಅಧ್ಯಕ್ಷರ ಮಗಳಾದ ಕಾರಣಕ್ಕಾಗಿ ಆಕೆಗೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಸಾಮಾನ್ಯ ಸಮವಸ್ತ್ರದಲ್ಲಿ ಸಾಶಾ ಭದ್ರತೆಗಾಗಿ ಸಿಬ್ಬಂದಿಗಳು ಇರುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 
 

ವೆಬ್ದುನಿಯಾವನ್ನು ಓದಿ