ಚೀನಾ ಎದುರಿಸಲು ಭಾರತಕ್ಕೆ ಮಿಲಿಟರಿ ಸಹಾಯ ಮಾಡಲು ಮುಂದಾದ ಅಮೆರಿಕಾ
ಶುಕ್ರವಾರ, 26 ಜೂನ್ 2020 (10:00 IST)
ನವದೆಹಲಿ: ಗಡಿ ರಾಷ್ಟ್ರಗಳ ಜತೆ ಖ್ಯಾತೆ ತೆಗೆದು ಶಾಂತಿ ಕದಡುವ ಕೆಲಸ ಮಾಡುತ್ತಿರುವ ಚೀನಾಕ್ಕೆ ತಕ್ಕ ಪಾಠ ಕಲಿಸಲು ಅಮೆರಿಕಾವೂ ಭಾರತದ ಕೈ ಜೋಡಿಸಲು ಮುಂದಾಗಿದೆ.
ಭಾರತ, ಮಲೇಷ್ಯಾ, ಇಂಡೋನೇಷ್ಯಾ, ಪಿಲಿಫೈನ್ಸ್ ನಂತಹ ದೇಶಗಳಿಗೆ ಚೀನಾದಿಂದ ಹೆಚ್ಚುತ್ತಿರುವ ಮಿಲಿಟರಿ ಅಪಾಯವನ್ನು ಎದುರಿಸಲು ಅಮೆರಿಕಾ ಈ ಭಾಗದಲ್ಲಿಯೂ ತನ್ನ ಸೇನೆಯ ಜಾಗತಿಕ ನಿಯೋಜನೆ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಅಮೆರಿಕಾ ರಾಷ್ಟ್ರೀಯ ಕಾರ್ಯದರ್ಶಿ ಮೈಕ್ ಪೋಂಪಿಯೋ ಹೇಳಿದ್ದಾರೆ.
ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ದೇಶನ ಪಡೆಯಲಾಗುತ್ತಿದೆ. ಪಿಎಲ್ಎಯಿಂದ ಜಗತ್ತಿನ ಇತರ ರಾಷ್ಟ್ರಗಳು ಅನುಭವಿಸುತ್ತಿರುವ ಅಪಾಯ ಎದುರಿಸಲು ನಾವು ಬೆಂಬಲ ನೀಡಲಿದ್ದೇವೆ ಎಂದು ಅಮೆರಿಕಾ ಹೇಳಿದೆ.