ಪತಿಯೊಂದಿಗೆ ವಾಸಿಸಲು ಸಹೋದರಿಯ ಪಾಸ್‍ಪೋರ್ಟ್ ಬಳಕೆ!
ಘಟನೆಗೆ ಸಂಬಂಧಿಸಿದಂತೆ ಹರ್ಬಿಮ್ ನಗರದ ನಿವಾಸಿಯಾಗಿರುವ ಝೌ ಸಹೋದರಿಯರ ತನಿಖೆ ನಡೆಸಲಾಗುತ್ತಿದೆ. ಹಾಂಗ್ ಎನ್ನುವವಳು ಜಪಾನ್ನಲ್ಲಿರುವ ತನ್ನ ಪತಿಯೊಂದಿಗೆ ಇರಲು ಬಯಸಿದ್ದಳು. ಆದರೆ ಆಕೆಯ ವೀಸಾ ಅರ್ಜಿಗಳನ್ನು ಅಧಿಕಾರಿಗಳು ತಿರಸ್ಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಆಕೆ ಜಪಾನ್, ಚೀನಾ, ರಷ್ಯಾ ದೇಶಗಳಿಗೆ ತೆರಳಲು ತನ್ನ ಅವಳಿ ಸಹೋದರಿಯ ಪಾಸ್ಪೋರ್ಟ್ನ್ನು ಬಳಸುತ್ತಿದ್ದಳು.
ಇದೇ ರೀತಿ ಸುಮಾರು 30 ಬಾರಿ ತನ್ನ ಅವಳಿ ಸಹೋದರಿಯ ಪಾಸ್ಪೋರ್ಟ್ನ್ನು ಬಳಸಿದ್ದಾಳೆ. ಆದರೆ ಈ ಬಾರಿ ಚೀನಾಕ್ಕೆ ಆಗಮಿಸುವಾಗ ಆಕೆ ಅವಳಿ ಸಹೋದರಿಯ ವೀಸಾವನ್ನು ಬಳಸಿರುವ ವಿಷಯ ಬಯಲಾಗಿದೆ. ಜೊತೆಗೆ ಆಕೆ ಈ ಮೊದಲು ಪ್ರಯಾಣ ಬೆಳೆಸಿದ್ದ ಇತಿಹಾಸವನ್ನು ಪರಿಶೀಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಇಬ್ಬರು ಅವಳಿ ಸಹೋದರಿಯನ್ನು ಬಂಧಿಸಿದ್ದಾರೆ.