ಅಮೆರಿಕಾದ 755 ರಾಯಭಾರಿಗಳಿಗೆ ದೇಶ ತೊರೆಯುವಂತೆ ರಷ್ಯಾ ಆದೇಶ

ಸೋಮವಾರ, 31 ಜುಲೈ 2017 (10:49 IST)
ಮಾಸ್ಕೋ: ರಷ್ಯಾದಲ್ಲಿರುವ ಸುಮಾರು 755 ಅಮೆರಿಕ ರಾಯಭಾರಿಗಳನ್ನು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡಲೇ ದೇಶ ತೊರೆಯುವಂತೆ ಆದೇಶ ನೀಡಿದ್ದಾರೆ.
 
ರಷ್ಯಾ ವಿರುದ್ಧದ ನಿರ್ಬಂಧಗಳನ್ನು ಕಠಿಣಗೊಳಿಸುವ ವಿಧೇಯಕಕ್ಕೆ ಅಮೆರಿಕ ಸೆನೆಟ್ ಅನುಮೋದನೆ ನೀಡಿರುವ ಹಿನ್ನಲೆಯಲ್ಲಿ ಅಮೆರಿಕ ವಿರುದ್ಧ ಕೆಂಡಾಮಂಡಲವಾಗಿರುವ ವ್ಲಾಡಿಮಿರ್ ಪುಟಿನ್, ತಮ್ಮ ದೇಶದಲ್ಲಿರುವ 755 ಅಮೆರಿಕ  ರಾಜತಾಂತ್ರಿಕರನ್ನು ದೇಶದಿಂದ ಹೊರ ಹಾಕುವ ನಿರ್ಧಾರಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಮೆರಿಕ ರಾಯಭಾರಿಗಳು ತಕ್ಷಣ ರಷ್ಯಾದಿಂದ  ನಿರ್ಗಮಿಸಬೇಕೆಂದು ಪುಟಿನ್ ತಾಕೀತು ಮಾಡಿದ್ದಾರೆ.
 
ರಷ್ಯಾ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿದ ಆರೋಪ ಹಾಗೂ 2014ರಲ್ಲಿ ಕ್ರೀಮಿಯಾದ ಮೇಲೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಆ ದೇಶದ ವಿರುದ್ಧ ಕಠಿಣ ನಿರ್ಬಂಧಗಳನ್ನು ಹೇರುವ ವಿಧೇಯಕವನ್ನು  ಅಮೆರಿಕ ಸೆನೆಟ್ ಗುರುವಾರ ಬಹುಮತದೊಂದಿಗೆ ಅಂಗೀಕರಿಸಿತ್ತು.
 

ವೆಬ್ದುನಿಯಾವನ್ನು ಓದಿ