ನಮ್ಮದು ವೈಭವೀಕರಿಸಿದ ಕಾರ್ಯಕರ್ತರ ಸಂಘಟನೆಯಲ್ಲ : ಎಲೋನ್ ಮಸ್ಕ್

ಮಂಗಳವಾರ, 18 ಏಪ್ರಿಲ್ 2023 (12:59 IST)
ನೀವು ವೈಭವೀಕರಿಸಿದ ಕಾರ್ಯಕರ್ತ ಸಂಘಟನೆಯನ್ನು ನಡೆಸಲು ಪ್ರಯತ್ನಿಸದಿದ್ದರೆ ಮತ್ತು ಸೆನ್ಸರ್ಶಿಪ್ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸದಿದ್ದರೆ ಬಹಳಷ್ಟು ಜನರನ್ನು ಕೈಬಿಡಬಹುದು.
 
ಹೀಗಾಗಿ ಶೇ.80 ರಷ್ಟು ಉದ್ಯೋಗವನ್ನು ಕಡಿತ ಮಾಡಿದರೂ ಯಾವುದೇ ಸಮಸ್ಯೆಯಾಗಲಿಲ್ಲ ಎಂದು ಉತ್ತರಿಸಿದರು.  ಸಾಧ್ಯವಾದಷ್ಟು ನ್ಯಾಯಯುತ ಮತ್ತು ಪಕ್ಷಪಾತವಿಲ್ಲದೇ ಕೆಲಸ ಮಾಡುವುದು ಹೊಸ ಟ್ವಿಟ್ಟರ್ನ ಗುರಿ. ಈ ಕಾರಣಕ್ಕೆ ನಾವು ಯಾವುದೇ ರಾಜಕೀಯ ಸಿದ್ಧಾಂತಕ್ಕೆ ಒಲವು ತೋರುವುದಿಲ್ಲ ಎಂದರು. 

ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ಖರೀದಿಸಿದಾಗ ಸುಮಾರು 8 ಸಾವಿರ ಉದ್ಯೋಗಿಗಳಿದ್ದರು. ಈಗ ಉದ್ಯೋಗಿಗಳ ಸಂಖ್ಯೆ 2 ಸಾವಿರಕ್ಕೆ ಇಳಿಕೆಯಾಗಿದ್ದು ಶೇ.80ರಷ್ಟು ಮಂದಿಗೆ ಗೇಟ್ಪಾಸ್ ನೀಡಲಾಗಿದೆ.

ನಷ್ಟದಲ್ಲಿರುವ ಕಂಪನಿಯನ್ನು ಮೇಲಕ್ಕೆ ಎತ್ತಲೂ ಉದ್ಯೋಗ ಕಡಿತ ಅನಿವಾರ್ಯ. ಇಲ್ಲದೇ ಇದ್ದರೆ ಕಂಪನಿಯೇ ಮುಳಗಬಹುದು ಎಂದು ಮಸ್ಕ್ ತಮ್ಮ ನಿರ್ಧಾರವನ್ನು ಹಿಂದೆ ಸಮರ್ಥಿಸಿಕೊಂಡಿದ್ದರು.
ಟ್ವಿಟ್ಟರ್ ಎಡಚಿಂತನೆಯನ್ನು ಬಲವಾಗಿ ಬೆಂಬಲಿಸುತ್ತದೆ. ನಾನು ಇಲ್ಲಿಯವರೆಗೆ ಡೆಮಾಕ್ರೆಟಿಕ್ ಬೆಂಬಲಿಸುತ್ತಿದ್ದೆ ವೋಟು ಹಾಕುತ್ತಿದ್ದೆ. ಆದರೆ ಇನ್ನು ಮುಂದೆ ನಾನು ಡೆಮಾಕ್ರೆಟಿಕ್ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ. ರಿಪಬ್ಲಿಕ್ಗೆ ಬೆಂಬಲ ನೀಡುತ್ತೇನೆ ಎಂದು ತಿಳಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ