ಸಶಸ್ತ್ರ ಪಡೆಗಳ ಸೇವೆಗೆ ಪುಟಿನ್ ಹೇಳಿದ್ದೇನು?

ಭಾನುವಾರ, 27 ಫೆಬ್ರವರಿ 2022 (17:25 IST)
ಮಾಸ್ಕೋ : ರಷ್ಯಾ ಒಕ್ಕೂಟದ ವಿಶೇಷ ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಮತ್ತು ಅವರ ನಿಷ್ಕಲ್ಮಶ ಸೇವೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಧನ್ಯವಾದ ಅರ್ಪಿಸಿದ್ದಾರೆ.

ಮಾಸ್ಕೋ ಕ್ರೆಮ್ಲಿನ್ನಲ್ಲಿ ಮಾತನಾಡಿದ ಅವರು, ನಾನು ವಿಶೇಷ ಕಾರ್ಯಾಚರಣೆ ಪಡೆಗಳ ಕಮಾಂಡ್, ಸಿಬ್ಬಂದಿಗೆ, ರಷ್ಯಾದ ಜನತೆ ಮತ್ತು ನಮ್ಮ ಮಹಾನ್ ಮಾತೃಭೂಮಿಗೆ ಅವರು ಮಾಡಿದ ನಿಷ್ಕಲ್ಮಶ ಸೇವೆಗಾಗಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ. 

ಇದೀಗ ರಷ್ಯಾದ ಪಡೆ ಉಕ್ರೇನ್ ದೇಶದ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ನಲ್ಲಿ ಗ್ಯಾಸ್ ಪೈಪ್ಲೈನ್ ಸ್ಫೋಟಗೊಳಿಸಿದ್ದಾರೆ. ರಷ್ಯಾದ ಕ್ಷಿಪಣಿಗಳು ಕೈವ್ನ ನೈಋತ್ಯದ ಉಕ್ರೇನಿಯನ್ ಪಟ್ಟಣವಾದ ವಾಸಿಲ್ಕಿವ್ಗೆ ಅಪ್ಪಳಿಸಿ ತೈಲ ಟರ್ಮಿನಲ್ ಸುಟ್ಟು ಹಾಕಲಾಗಿದೆ.

ಭಾನುವಾರ ರಷ್ಯಾ ಪಡೆಗಳು ದಕ್ಷಿಣ ಉಕ್ರೇನಿಯನ್ ನಗರಗಳಾದ ಖೆರ್ಸನ್ ಮತ್ತು ಬರ್ಡಿಯಾನ್ಕ್ಸ್ವನ್ನು ಸಂಪೂರ್ಣವಾಗಿ ನಿರ್ಬಂಧಿಸಿವೆ. ಹೆನಿಚೆಸ್ಕ್ ಪಟ್ಟಣ ಮತ್ತು ಖೆರ್ಸನ್ ಬಳಿಯ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ