ಎಲ್ಲಿ ಗಾಂಜಾ ಬೆಳೆಯೋದು ಅಪರಾಧವಲ್ಲ!

ಶನಿವಾರ, 11 ಜೂನ್ 2022 (09:11 IST)
ಬ್ಯಾಂಕಾಕ್ : ಇದೇ ಮೊದಲ ಬಾರಿಗೆ ದಕ್ಷಿಣ ಏಷ್ಯಾದ ದೇಶದಲ್ಲಿ ಗಾಂಜಾ ಬೆಳೆಯುವುದಕ್ಕೆ ಅನುಮತಿ ನೀಡಲಾಗಿದೆ.

ಗಾಂಜಾ ಬೆಳೆಯುವುದು ಅಪರಾಧವಲ್ಲ ಎಂದು ಥೈಲ್ಯಾಂಡ್ನಲ್ಲಿ ಘೋಷಿಸಿದೆ. ಗಾಂಜಾವನ್ನು ತೋಟಗಾರಿಕೆ, ವ್ಯಾಪಾರ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಬಹುದು. ಇದು ಅಪರಾಧವಲ್ಲ ಎಂದು ಥೈಲ್ಯಾಂಡ್ ಆರೋಗ್ಯ ಸಚಿವ ಅನುಟಿನ್ ಚಾರ್ನ್ವಿರಾಕುಲ್ ಹೇಳಿದ್ದಾರೆ.

ಗಾಂಜಾ ಬೆಳೆಯುವುದು ಇನ್ನು ಕಾನೂನು ಬಾಹಿರವಲ್ಲ. ಆರ್ಥಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಆದರೆ ವೈದ್ಯಕೀಯ ಬಳಕೆಗೆ ಮಾತ್ರವೇ ಅದಕ್ಕೆ ಅನುಮತಿ ನೀಡಲಾಗಿದ್ದು, ಮಾದಕದ್ರವ್ಯ ಬಳಕೆಗೆ ಇನ್ನೂ ಕಾನೂನುಬಾಹಿರವಿದೆ ಎಂದು ಚಾರ್ನ್ವಿರಾಕುಲ್ ಎಚ್ಚರಿಸಿದ್ದಾರೆ.

 ರೆಸ್ಟೋರೆಂಟ್ಗಳಲ್ಲಿ ಆಹಾರ ಹಾಗೂ ಪಾನೀಯಗಳಲ್ಲಿ ಗಾಂಜಾದ ಬಳಕೆ ಮಾಡಬಹುದು. ಆದರೆ ಸಸ್ಯದ ಮುಖ್ಯ ಸೈಕೋಆಕ್ಟಿವ್ ಸಂಯುಕ್ತದ ಟೆಟ್ರಾಹೈಡ್ರೊಕಾನ್ನಬಿನಾಲ್(ಟಿಹೆಚ್ಸಿ) ಅನ್ನು ಶೇ.0.2 ಕ್ಕಿಂತ ಕಡಿಮೆ ಬಳಸಬೇಕು ಎಂದು ತಿಳಿಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ