ಇಂದಿನಿಂದ ಹ್ಯಾಮ್ ಬರ್ಗ್ ಜಿ-20 ಶೃಂಗಸಭೆ ನಡೆಯುತ್ತಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಹಾಗೂ ಪ್ರಧಾನಿ ಮೋದಿ ಮುಖಾಮುಖಿಯಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಚೀನಾ, ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಮೋದಿ ಹಾಗೂ ಜಿನ್ ಪಿಂಗ್ ನಡುವೆ ಯಾವುದೇ ರೀತಿಯ ಮಾತುಕತೆ ನಡೆಯುವುದಿಲ್ಲ. ಮಾತುಕತೆಗೆ ಇದು ಸೂಕ್ತ ಸಮಯವಲ್ಲ ಎಂದು ಹೇಳಿತ್ತು.
ಇದಕ್ಕೆ ಸಮರ್ಪಕವಾಗು ಉತ್ತರ ನೀಡಿರುವ ಭಾರತ, ಇಷ್ಟಕ್ಕೂ ದ್ವಿಪಕ್ಷೀಯ ಚರ್ಚೆ ಕುರಿತು ಸಭೆ ನಡೆಸಿ ಎಂದು ಯಾರು ಕೇಳಿದರು. ದ್ವಿಪಕ್ಷೀಯ ಸಭೆ ನಡೆಸುವಂತೆ ನಾವು ಚೀನಾವನ್ನು ಕೇಳಿಯೇ ಇಲ್ಲ. ಹೀಗಾಗಿ ಸೂಕ್ತ ವಾತಾವರಣದ ಪ್ರಶ್ನೆಯೇ ಮೂಡುವುದಿಲ್ಲ. ಚೀನಾ ಅಧ್ಯಕ್ಷರೊಂದಿಗೆ ಭಾರತ ಪ್ರತ್ಯೇಕ ಮಾತುಕತೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.