ನವದೆಹಲಿ: ಪ್ರಪಂಚದಲ್ಲಿ ವಿಚ್ಛೇದನಕ್ಕೆ ಎಂತೆಂತಹಾ ಕಾರಣಗಳೆಲ್ಲಾ ಇರುತ್ತವೆ ಎನ್ನುವುದಕ್ಕೆ ವಿದೇಶದಲ್ಲಿ ನಡೆದ ಈ ಘಟನೆ ಸಾಕ್ಷಿ ನೋಡಿ. ಅಷ್ಟಕ್ಕೂ ಅಂತಹದ್ದೇನಾಯ್ತು ಇಲ್ಲಿ ನೋಡಿ.
ಗಂಡನ ನೈರ್ಮ್ಯಲ್ಯ ಕೊರತೆಯಿಂದ ಬೇಸತ್ತ ಹೆಂಡತಿ ವಿಚ್ಛೇದನ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದಳು. ಆಕೆಯ ಆರೋಪಗಳು ನಿಜವೆಂದು ಸಾಬೀತಾದ ಹಿನ್ನಲೆಯಲ್ಲಿ ಕೋರ್ಟ್ ಕೂಡಾ ವಿಚ್ಛೇದನ ಮಂಜೂರು ಮಾಡಿದೆ. ಇದಕ್ಕಾಗಿ ಆಕೆ ಪತಿಯ ಸಹೋದ್ಯೋಗಿಯನ್ನೇ ಸಾಕ್ಷಿಗಾಗಿ ಕೋರ್ಟ್ ಗೆ ಕರೆ ತಂದಿದ್ದಳು.
ಹೆಂಡತಿಯ ಆರೋಪವೇನು?
ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ ಮಹಿಳೆ ಗಂಡನ ಮೇಲೆ ಆರೋಪಗಳ ಸುರಿಮಳೆ ಸುರಿಸಿದ್ದಾಳೆ. ನನ್ನ ಗಂಡ 10 ದಿನಕ್ಕೊಮ್ಮೆ ಮಾತ್ರ ಸ್ನಾನ ಮಾಡುತ್ತಾನೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾತ್ರ ಹಲ್ಲುಜ್ಜುತ್ತಾನೆ. ಇದರಿಂದ ಬಾಯಿ ಮತ್ತು ದೇಹ ದುರ್ವಾಸನೆ ಬರುತ್ತಿದ್ದು, ಆತನ ಜೊತೆ ಜೀವನ ಮಾಡಲು ಕಷ್ಟವಾಗುತ್ತಿದೆ ಎಂದು ಹೆಂಡತಿ ಆರೋಪಿಸಿದ್ದಳು. ಅಷ್ಟೇ ಅಲ್ಲ, ತನ್ನ ಆರೋಪಗಳು ನಿಜವೆಂದು ಸಾಬೀತುಪಡಿಸಲು ಪತಿಯ ಸಹೋದ್ಯೋಗಿಯನ್ನು ಸಾಕ್ಷಿಯಾಗಿ ಕೋರ್ಟ್ ಗೆ ಕರೆತಂದಿದ್ದಾಳೆ. ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ವೈಯಕ್ತಿಕ ನೈರ್ಮ್ಯಲ್ಯ ಕೊರತೆಯಿಂದಾಗಿ ಪತಿಯಿಂದ ಪತ್ನಿಗೆ ವಿಚ್ಛೇದನ ಮಂಜೂರು ಮಾಡಲಾಗಿದೆ.
ಭಾರತದಲ್ಲೂ ನಡೆದಿದೆ ಇಂತಹ ಪ್ರಕರಣಗಳು
ಇಂತಹ ಪ್ರಕರಣ ಕೇಳಲು ವಿಚಿತ್ರವೆನಿಸಬಹುದು. ಆದರೆ ನಮ್ಮ ಭಾರತದಲ್ಲೂ ಇಂತಹದ್ದೇ ಕಾರಣಕ್ಕೆ ವಿಚ್ಛೇದನ ನಡೆದ ಅನೇಕ ಉದಾಹರಣೆಗಳಿವೆ. ಸಂಗಾತಿಯ ದೇಹ ನೈರ್ಮಲ್ಯ ಕೊರತೆಯಿಂದ ಬೇಸತ್ತ ಹೆಂಡತಿಯರು ವಿಚ್ಛೇದನ ಪಡೆದ ಉದಾಹರಣೆಗಳು ನಮ್ಮಲ್ಲೂ ಇವೆ.