ಲಿನ್ ಅರೋನ್ಬರ್ಗ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಕ್ಕಾ ಅಭಿಮಾನಿಯಂತೆ. ಇದೇ ಹುಚ್ಚು ಅಭಿಮಾನದಿಂದ ಆಕೆ ತನ್ನ ಪತಿಯಿಂದ ದೂರವಾಗಿದ್ದಾಳಂತೆ. ಲಿನ್ ಹಾಗೂ ಡೇವ್ 2015ರಲ್ಲಿ ಪ್ರೀತಿಸಿ ಮದುವೆಯಾಗಿದ್ರು. ಇಬ್ಬರೂ ಹೈ ಪ್ರೊಫೈಲ್ಡ್ ಲಿನ್, ಮಿಯಾಮಿ ಡಾಲ್ಫಿನ್ಸ್ ನ ಮಾಜಿ ಚಿಯರ್ ಲೀಡರ್. ಆಕೆಯ ಪತಿ ಡೇವ್ ಪಾಮ್ ಬೀಚ್ ಕಂಟ್ರಿಯ ಜನಪ್ರಿಯ ಪ್ರಾಸಿಕ್ಯೂಟರ್.
ಅಮೆರಿಕ ಚುನಾವಣೆಗೂ ಮುನ್ನ ಕಾರ್ಯಕ್ರಮವೊಂದರಲ್ಲಿ ಲಿನ್, ಡೊನಾಲ್ಡ್ ಟ್ರಂಪ್ ದಂಪತಿಯನ್ನು ಭೇಟಿಯಾಗಿದ್ಲು. ಈ ವೇಳೆ ಲಿನ್ ಟ್ರಂಪ್ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಳು. ಆದ್ರೆ ಆಕೆಯ ಪತಿ ಡೇವ್ ಮಾತ್ರ ಪೋಟೋ ತೆಗೆಸಿಕೊಳ್ಳಲಿಲ್ಲ, ಅದನ್ನು ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡದಂತೆಯೂ ಪತ್ನಿಗೆ ಸೂಚಿಸಿದ್ದನಂತೆ. ಅದರೆ ಆಕೆ ಅದನ್ನು ಕೇಳದೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾಳಂತೆ ಹೀಗೆ ಟ್ರಂಪ್ ಜೊತೆಗಿನ ಸೆಲ್ಫಿಯಿಂದ ಶುರುವಾದ ಜಗಳ ದಂಪತಿಯನ್ನೇ ದೂರ ಮಾಡಿದ್ದಲ್ಲದೇ ವಿಚ್ಚೇದನದವರೆಗೂ ಬಂದು ನಿಂತಿದೆ.