ಮಂಚದ ಮೇಲೆಯೇ ಪತಿ ಮೃತದೇಹವಿದ್ದರೂ ಆಕೆಗೆ ಗೊತ್ತೇ ಆಗಲಿಲ್ಲ!
ಇಂತಹದ್ದೊಂದು ವಿಚಿತ್ರ ಘಟನೆ ಅಮೆರಿಕಾದಲ್ಲಿ ನಡೆದಿದೆ. 76 ವರ್ಷದ ಪತಿ ಗುಂಡಿನ ದಾಳಿಗೊಳಗಾಗಿ ಬೆಡ್ ಮೇಲೇ ಸಾವನ್ನಪ್ಪಿದ್ದ. ಆದರೆ ಅಂಧ ಪತ್ನಿಗೆ ಈ ವಿಚಾರವೇ ತಿಳಿದಿರಲಿಲ್ಲ. ಹೀಗಾಗಿ ಆಕೆ ಪತಿ ನಾಪತ್ತೆಯಾಗಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದಳು.
ಪೊಲೀಸರು ತನಿಖೆ ನಡೆಸಲು ಮನೆಗೆ ಬಂದಾಗ ಮೃತದೇಹ ಬೆಡ್ ಮೇಲೆಯೇ ಇತ್ತು. ಬೆಡ್ ರೂಂನ ಕಿಟಿಕಿ ಗಾಜು ಒಡೆದಿತ್ತು. ಹೀಗಾಗಿ ಗುಂಡಿನ ದಾಳಿಯಾಗಿದೆ ಎನ್ನುವುದು ಸ್ಪಷ್ಟವಾಗಿತ್ತು.