ಕಳೆದ 2014ರಲ್ಲಿ ವಿವಾಹವಾದ ಚೆಸ್ಟರ್‌ಫೀಲ್ಡ್ ನಗರದ ಸಮಂತಾ ರಾಗ್, ತನ್ನ ಪತಿ ವಿವಾಹವಾದ 18 ತಿಂಗಳು ನಂತರ ತೊರೆದು ಬೇರೆ ಯುವತಿಯೊಂದಿಗೆ ವಾಸಿಸುತ್ತಿರುವುದನ್ನು ಖಚಿತಪಡಿಸಿಕೊಂಡ ನಂತರ ವಿವಾಹದ ಡ್ರೆಸ್‌ಗಳನ್ನು ಮಾರಾಟಕ್ಕಿಡಲು ನಿರ್ಧರಿಸಿದ್ದಾಳೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಒಂದು ವೇಳೆ ನಿಮಗೂ ಕೆಟ್ಟ ನೆನಪುಗಳು ಕಾಡುತ್ತಿದ್ದರೆ, ನಿರೀಕ್ಷೆ, ಕನಸುಗಳು ಬತ್ತಿಹೋಗಿದ್ದರೆ ಅಂತಹವರು ನನ್ನ ವಿವಾಹದ ಡ್ರೆಸ್ ಖರೀದಿಸಬಹುದು. ನೀವು ಖರೀದಿಸಿದ ಡ್ರೆಸ್ ನಿಮಗೆ ಸಂತೋಷವನ್ನು ತರಬಹುದು. ಒಂದು ವೇಳೆ ನಿಮಗೆ ಇಷ್ಟವಾಗದಿದ್ದರೆ ಆನ್‌ಲೈನ್‌ನಲ್ಲಿ ಮರುಮಾರಾಟ ಮಾಡಿ ಎಂದು ತಿಳಿಸಿದ್ದಾಳೆ.