ನಿಮ್ಮ ಅಸಾಧಾರಣ ಕೌಶಲ್ಯವನ್ನ ಜಗತ್ತಿಗೆ ತೋರಿಸಿದ್ದೀರಿ : ಪ್ರಜ್ಞಾನಂದಗೆ ಮೋದಿ ಅಭಿನಂದನೆ

ಶುಕ್ರವಾರ, 25 ಆಗಸ್ಟ್ 2023 (09:05 IST)
ನವದೆಹಲಿ : ಅಜರ್ಬೈಜಾನ್ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್-2023 ಫೈನಲ್ ನ ಟೈ ಬ್ರೇಕರ್ನಲ್ಲಿ ಅಮೋಘ ಪ್ರದರ್ಶನದ ಹೊರತಾಗಿಯೂ ವಿರೋಚಿತ ಸೋಲನುಭವಿಸಿದ ಚೆಸ್ ಯುವ ಗ್ರ್ಯಾಂಡ್ ಮಾಸ್ಟರ್ ಭಾರತದ ಆರ್.ಪ್ರಜ್ಞಾನಂದ ಅವರನ್ನ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಜೊತೆಗೆ ಪ್ರಜ್ಞಾನಂದನ ಮುಂದಿನ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ ಎಂದೂ ಶುಭ ಹಾರೈಸಿದ್ದಾರೆ. ಚೆಸ್ ವಿಶ್ವಕಪ್ನ ಫೈನಲ್ ಟೈ ಬ್ರೇಕರ್ನ 2ನೇ ಸುತ್ತಿನಲ್ಲಿ 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಮ್ಯಾಗ್ನಸ್ ಕಾರ್ಲ್ಸೆನ್ ಗೆಲುವು ಸಾಧಿಸಿ 6ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಭಾರತೀಯ ಚೆಸ್ ಪಟು ಪ್ರಜ್ಞಾನಂದಗೆ ಸೋಲಾಗಿದ್ದು, ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ. 

ಪ್ರಜ್ಞಾನಂದ ಅವರ ಸಾಧನೆಯನ್ನ ಕೊಂಡಾಡಿರುವ ಭಾರತದ ಪ್ರಧಾನಿ, ಎಕ್ಸ್ (ಟ್ವೀಟರ್) ಮೂಲಕ ಹೆಮ್ಮ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರ ಅಸಾಧಾರಣ ಪ್ರತಿಭಾ ಕೌಶಲ್ಯವನ್ನ ಗುಣಗಾನ ಮಾಡಿದ್ದಾರೆ.

ಫೈನಲ್ನಲ್ಲಿ ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಎದುರು ಪ್ರಜ್ಞಾನಂದ ಸೋಲನುಭವಿಸಿದ್ದ ಬೆನ್ನಲ್ಲೇ ಟ್ವೀಟ್ ಮಾಡಿರುವ ಮೋದಿ ಯುವ ಚೆಸ್ ಪಟುವನ್ನು ಹುರಿದುಂಬಿಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ