ಚೀನಾದ ಮೋ ಯಾನ್ ಮುಡಿಗೆ ಪ್ರತಿಷ್ಠಿತ ನೊಬೆಲ್

ಶುಕ್ರವಾರ, 12 ಅಕ್ಟೋಬರ್ 2012 (11:44 IST)
ಚೀನಾದ ಖ್ಯಾತ ಲೇಖಕ ಮೋಯಾನ್ ಅವರಿಗೆ ಪ್ರತಿಷ್ಠಿತ ಸಾಹಿತ್ಯ ಕ್ಷೇತ್ರದ ನೊಬೆಲ್ ಪಾರಿತೋಷಕ ಅವರ ಮುಡಿಗೇರಿದೆ.

ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್ ಪ್ರಶಸ್ತಿ, ಪ್ರಸಕ್ತ ವರ್ಷ ಚೀನಾದ ಖ್ಯಾತ ಲೇಖಕ ಮೋಯಾನ್ ಅವರ ಪಾಲಾಗಿದೆ. ಚೀನಾ ದೇಶದಲ್ಲಿ ಸಾಹಿತ್ಯದಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ಮೋ ಯಾನ್ ಅವರು ತಮ್ಮ ಪ್ರಖ್ಯಾತ ಫೀಡ್ಸ್ ಆಫ್ ಸಫರಿಂಗ್ ಕೃತಿ ರಚನೆಗಾಗಿ ಪ್ರತಿಷ್ಠಿತ ನೊಬೆಲ್ ಪಾರಿತೋಷಕ ಪಡೆದುಕೊಂಡಿದ್ದಾರೆ. 1.2 ಮಿಲಿಯನ್ ಡಾಲರ್ ನಗದನ್ನು ಹೊಂದಿರುವ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಇದೀಗ ಚೀನಾ ದೇಶದ ಲೇಖಕರಿಗೆ ಒಲಿದಿದೆ.

ಪ್ರಸಕ್ತ ವರ್ಷದ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿಗೆ ಭಾಜನವಾದ ಫೀಡ್ಸ್ ಆಫ್ ಫೀಡಿಂಗ್ ಕೃತಿ, ಚೀನಾದ ಆಂತರಿಕ ಭ್ರಷ್ಟಾಚಾರ ಮತ್ತು ಹಸುಳೆಗಳನ್ನು ಬಲವಂತವಾಗಿ ಶಾಲೆಗೆ ದೂಡುವುದರಿಂದ ಮಕ್ಕಳ ಮನಸ್ಸಿನ ಮೇಲಾಗುವ ಪರಿಣಾಮಗಳ ಕುರಿತು ಬೆಳಕು ಚೆಲ್ಲುತ್ತದೆ.

ಈ ಅದ್ಭುತ ಕೃತಿಯ ಮೂಲಕ ಚೀನಾದ ಲೇಖಕ ಮೋ ಯಾನ್ ನೊಬೆಲ್ ಪ್ರಶಸ್ತಿ ಪಡೆಯುವುದರ ಮೂಲಕ ವಿಶ್ವಖ್ಯಾತಿಗಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ