ನಮಗೆ ಶಾಂತಿ ಬೇಕು ಆದರೆ ಭಾರತವೇ ಪ್ರತಿಕ್ರಿಯಿಸುತ್ತಿಲ್ಲ ಎಂದ ಪಾಕ್ ಸಚಿವ

ಸೋಮವಾರ, 7 ಆಗಸ್ಟ್ 2017 (10:05 IST)
ಇಸ್ಲಾಮಾಬಾದ್: ಪಾಕಿಸ್ತಾನ ಕಾಶ್ಮೀರ ವಿವಾದದ ಬಗ್ಗೆ  ಮಾತುಕತೆಗೆ ಸಿದ್ಧ. ಆದರೆ ಭಾರತವೇ ಸಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಪಾಕಿಸ್ತಾನದ ನೂತನ ವಿದೇಶಾಂಗ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಹೇಳಿಕೊಂಡಿದ್ದಾರೆ.

 
ಭಾರತ ಮತ್ತು ಪಾಕಿಸ್ತಾನ ನಡುವೆ ಸಂಬಂಧ ಹಳಸಲು ಭಾರತವೇ ಕಾರಣ ಎಂದು ದೂರಿರುವ ಅವರು ಪಾಕಿಸ್ತಾನದ ಶಾಂತಿ ಮಾತುಕತೆಯ ಆಹ್ವಾನಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲು ಭಾರತ ಮತ್ತು ಆಫ್ಘಾನಿಸ್ತಾನ ದೇಶಗಳು ವಿಫಲವಾಗಿವೆ ಎಂದಿದ್ದಾರೆ.

ಉಭಯ ದೇಶಗಳೂ ಪಾಕಿಸ್ತಾನದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು, ಶಾಂತಿ ಮಾತುಕತೆಗೆ ಮುಂದಾಗಲಿ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ.. ಇಂದು ಚಂದ್ರಗ್ರಹಣ: ಯಾವ ನಕ್ಷತ್ರದವರಿಗೆ ದೋಷ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ