ಷೇರು ಪೇಟೆಯ ಏರುಪೇರಿಗೆ ಸಂಸತ್ತು ಸಮಿತಿ ಕಳವಳ

ಬುಧವಾರ, 13 ಫೆಬ್ರವರಿ 2008 (11:14 IST)
ಇತ್ತೀಚನ ದಿನಗಳಲ್ಲಿ ಷೇರು ಪೇಟೆಯಲ್ಲಿ ಉಂಟಾಗುತ್ತಿರುವ ಅತೀಯಾದ ಏರುಪೇರಿಗೆ ಕಾರಣ ಯಾವುದು ಮತ್ತು ಇದರ ಲಾಭವನ್ನು ಯಾರು ಪಡೆಯುತ್ತಿದ್ದಾರೆ ಎಂದು ಸಂಸತ್ತಿನ ತಜ್ಞರ ಸಮಿತಿ ಕಳವಳ ವ್ಯಕ್ತಪಡಿಸಿತು ಎಂದು ತಿಳಿದು ಬಂದಿದೆ.

ಎಸ್ಇಬಿಐ ಅಧ್ಯಕ್ಷ ಎಂ. ದಾಮೋದರನ್, ಆರ್‌ಬಿಐ ಗವರ್ನರ್ ವೈ.ವಿ ರೆಡ್ಡಿ, ಎನ್ಎಸ್ಇ ಆಡಳಿತ ನಿರ್ದೇಶಕ ನಾರಾಯಣ ಮತ್ತು ಉಪ ನಿರ್ದೇಶಕ ಚಿತ್ರಾ ರಾಮಕೃಷ್ಣನ್ ಅವರುಗಳಿಗೆ, ಸಂಸತ್ತಿನ ಹಣಕಾಸಿನ ಸ್ಥಾಯೀ ಸಮಿತಿಯು, ಷೇರು ಪೇಟೆಯಲ್ಲಿನ ಏರುಪೇರಿನ ಕಾರಣಗಳ ಕುರಿತು ಪ್ರಶ್ನೆಗಳನ್ನು ಕೇಳಿದರು ಎಂದು ಮೂಲಗಳು ತಿಳಿಸಿವೆ.

ಎನ್ಎಸ್ಇ ಮತ್ತು ಬಿಎಸ್ಇಯು, ಷೇರು ಪೇಟೆಯಲ್ಲಿನ ಏರುಪೇರಿಗೆ ಕಡಿವಾಣ ಹಾಕಲು ಯಾವ ರೀತಿ ಕ್ರಮಗಳನ್ನು ಕೈಗೊಂಡಿದೆ ಎಂದು ಸಮಿತಿಯ ಕೆಲವು ಸದಸ್ಯರು ತಿಳಿಯ ಬಯಸಿದರೆ, ಕೆಲವು ಸದಸ್ಯರು ಪ್ರಾರಂಭಿಕ ಸಾರ್ವಜನಿಕ ಕೊಡುಗೆಗೆ ಬೆಲೆ ನಿಗದಿ ಮಾಡಲು ಮಾನ ದಂಡ .ಯಾವುದು ಎಂದು ಪ್ರಶ್ನಿಸಿದರು.

ವೆಬ್ದುನಿಯಾವನ್ನು ಓದಿ