ಎಟಿಎಂ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ ಅಸಲಿ ಸಂಗತಿಗಳು!

ಸೋಮವಾರ, 26 ಡಿಸೆಂಬರ್ 2016 (16:58 IST)
ಮನುಷ್ಯನ ದೈನಂದಿನ ಜೀವನದಲ್ಲಿ ಎಟಿಎಂ ಸಹ ಒಂದು ಪ್ರಮುಖ ಭಾಗವಾಗಿದೆ. ಎಟಿಎಂ ಮಶಿನ್ ಮೂಲಕ ಹಣ ಡ್ರಾ ಮತ್ತು ವರ್ಗಾವಣೆ ಜೊತೆಗೆ ಬಿಲ್‌ಗಳನ್ನು ಸಹ ಪಾವತಿಸಬಹುದಾಗಿದೆ ಎಂದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಆದರೆ ನೀವು ಎಂದಾದರು, ಎಷ್ಟು ಎಟಿಎಂ ಮಶಿನ್‌ಗಳಿವೆ ಎಂದು ಯೋಚಿಸಿದ್ದೀರಾ? ಕಾರ್ಡ್ ಬಳಕೆಗೆ 4 ಸಂಖ್ಯೆಯ ಪಿನ್ ಅವಶ್ಯಕತೆಯ ಕುರಿತು ನಿಮಗೆ ಗೊತ್ತೆ? ವಿಶ್ವದ ಅತ್ಯುನ್ನತ ಎಟಿಎಂ ಎಲ್ಲಿದೆ ಎನ್ನುವ ಬಗ್ಗೆ ತಿಳಿಯಬೇಕಾ?
ನೀವು ಎಟಿಎಂ ಕುರಿತು ತಿಳಿಯ ಬೇಕಾದ 10 ಆಕರ್ಷಕ ಮತ್ತು ವಿನೋದ ಸಂಗತಿಗಳು ಇಲ್ಲಿವೆ.
 
ಎಟಿಎಂ ಕಾರ್ಡ್‌ ಪಿನ್ ಸಂಖ್ಯೆಯ ರೋಚಕ ಕಥೆ....
 
ಎಟಿಎಂ ಕಾರ್ಡ್‌ ಬಳಕೆಗಾಗಿ ನಾವು ಉಪಯೋಗಿಸುವ 4 ಅಂಕಿಯ ಪಿನ್ ಸಂಖ್ಯೆ ಕುರಿತು ಒಂದು ರೋಚಕ ಕಥೆಯೇ ಇದೆ. ಎಟಿಎಂ ಸಂಶೋಧಕ ಶೆಫರ್ಡ್-ಬ್ಯಾರನ್, 1960 ರ ದಶಕದಲ್ಲಿ 6 ಅಂಕಿಯ ಪಿನ್ ಸಂಖ್ಯೆಯನ್ನು ನಿಗದಿ ಮಾಡಬೇಕು ಎಂದು ಚಿಂತಿಸಿದ್ದರು. ಆದರೆ, ತನ್ನ ಮಡದಿ ಕ್ಯಾರೋಲಿನ್‌ ಅವರಿಗೆ ನಾಲ್ಕು ಅಂಕಿಯ ಪಿನ್ ಸಂಖ್ಯೆಯನ್ನು ಮಾತ್ರ ನೆನಪಿಡುಲು ಸಾಧ್ಯವೆಂದು ತಿಳಿದು, ಎಟಿಎಂ ಪಿನ್ ಸಂಖ್ಯೆಯನ್ನು ನಾಲ್ಕಕ್ಕೆ ನಿಗದಿ ಮಾಡಿದರು. ಸ್ವಿಜರ್ಲ್ಯಾಂಡ್ ಮತ್ತು ಕೆಲ ದೇಶಗಳನ್ನು ಹೊರತು ಪಡಿಸಿ, ಸಾಮಾನ್ಯವಾಗಿ ಎಲ್ಲಾ ದೇಶಗಳಲ್ಲಿ 4 ಅಂಕಿಯ ಪಿನ್ ಸಂಖ್ಯೆಯೇ ಚಲಾವಣೆಯಲ್ಲಿದೆ. 
 
ಚಿನ್ನ ಡ್ರಾ ಮಾಡುವ ಎಟಿಎಂ....
 
ಎಟಿಎಂ ಮಶಿನ್‌ಗಳಿಂದ ಹಣ ಡ್ರಾ ಮಾಡುವುದು ಸಾಮಾನ್ಯ, ಆದರೆ ಅಬುಧಾಬಿಯಲ್ಲಿರುವ ಪ್ಯಾಲಸ್ ಹೋಟೆಲ್‌ನಲ್ಲಿರುವ ಎಟಿಎಂ ಮಶಿನ್‌ನಿಂದ 320 ವಿಧದ ಚಿನ್ನದ ವಸ್ತುಗಳನ್ನು ಡ್ರಾ ಮಾಡಬಹುದಂತೆ. 
 
ತೇಲಾಡುವ ಎಟಿಎಂ....
 
ಭಾರತದ ಪ್ರಥಮ ತೇಲಾಡುವ ಎಟಿಎಂ ಮಶಿನ್‌ನ್ನು ಕೇರಳ ರಾಜ್ಯದ ಕೊಚ್ಚಿ ಜಿಲ್ಲೆಯಲ್ಲಿ ಕಾಣಬಹುದು. ಕೇರಳದ ಶಿಪ್ಪಿಂಗ್ ಅಂಡ್ ಇನ್ಲ್ಯಾಂಡ್ ನ್ಯಾವಿಗೇಶನ್ ಕಾರ್ಪೋರೇಶನ್ ಒಡೆತನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಮಶಿನ್‌ನ್ನು ತೇಲಾಡುವ ರೀತಿಯಲ್ಲಿ ಅಳವಡಿಸಲಾಗಿದೆ.
 
ಸಂಪೂರ್ಣ ಎಟಿಎಂ ಮಶಿನ್‌ ಕದ್ದರೆ.....
 
ಎಟಿಎಂ ಮಶಿನ್‌ನಿಂದ ಹಣ ಮಾತ್ರವಲ್ಲದೆ ಸಂಪೂರ್ಣ ಎಟಿಎಂ ಕದ್ದು ಪರಾರಿಯಾಗುವ ಕಳ್ಳರಿಗೆ ಎಟಿಎಂ ಸರಿಯಾಗಿ ಬುದ್ಧಿ ಕಲಿಸುತ್ತದೆ. ಈ ಮಶಿನ್‌ಗಳಲ್ಲಿ ಜಿಪಿಎಸ್ ಚಿಪ್‌ಗಳನ್ನು ಅಳವಡಿಸಿರುವುದರಿಂದ ಕಳ್ಳರು ದೂರಕ್ಕೆ ತೆರಳುವ ಮುನ್ನ ಪೊಲೀಸರಿಗೆ ಹತ್ತಿರವಾಗಿರುತ್ತಾರೆ.
 
ಯಾವ ವಾರ ಹೆಚ್ಚು ಹಣ ಡ್ರಾ ಆಗುತ್ತೆ ಗೊತ್ತೆ?....
 
ಸಾಕಷ್ಟು ಜನ ಶನಿವಾರ ಮತ್ತು ಭಾನುವಾರವೆಂದು ಹೇಳುತ್ತಾರೆ, ಆದರೆ ಅದು ತಪ್ಪು, ವೀಕೆಂಡ್ ಮೋಜು ಮಸ್ತಿಗಾಗಿ ಶುಕ್ರವಾರ ಹೆಚ್ಚು ಹಣ ಡ್ರಾ ಆಗುತ್ತೆ. 
 
ಬ್ಯಾಂಕ್ ಖಾತೆ ಇಲ್ಲದೆ ಎಟಿಎಂ ಪಡೆಯಬಹುದು...
 
ಭಾರತದಲ್ಲಿ ಬ್ಯಾಂಕ್ ಖಾತೆ ಇಲ್ಲದೆ ಎಟಿಎಂ ಪಡೆಯುವುದು ಅಸಾಧ್ಯ, ಆದರೆ ರೊಮೇನಿಯಾ ದೇಶದಲ್ಲಿ ಬ್ಯಾಂಕ್ ಖಾತೆ ಇಲ್ಲದೆ ಗ್ರಾಹಕರು ಎಟಿಎಂ ಕಾರ್ಡ್ ಪಡೆಯಬಹುದಂತೆ.
 
ಬಯೋಮೆಟ್ರಿಕ್ ಪಾಸ್‌ವರ್ಡ್/ ಪಿನ್.....
 
ಎಟಿಎಂ ಪಾಸ್‌ವರ್ಡ್ ಸುರಕ್ಷತೆ ಬಹುಮುಖ್ಯವಾದ ಹಿನ್ನೆಲೆಯಲ್ಲಿ ಬ್ರೆಜಿಲ್ ದೇಶ, ಬ್ಯಾಂಕಿಂಗ್ ವ್ಯವಹಾರದ ಸುರಕ್ಷತೆ ಕಾಯ್ದುಕೊಳ್ಳಲು ಅತ್ಯಾದುನಿಕ ಬಯೋಮೆಟ್ರಿಕ್ ಪಾಸ್‌ವರ್ಡ್ ಬಳಸುತ್ತಿದೆ.
 
ಭಾರತದ ಮೊದಲ ಎಟಿಎಂ ಮಶಿನ್?.....
 
ಭಾರತದಲ್ಲಿ ಪ್ರಪ್ರಥಮವಾಗಿ ಹಾಂಗ್ ಕಾಂಗ್ ಅಂಡ್ ಶಾಂಘೈ ಬ್ಯಾಂಕಿಂಗ್ ಕಾರ್ಪೊರೇಶನ್ ಎಟಿಎಂ ಸೇವೆಯನ್ನು ನೀಡಿದ್ದು, 1987 ರಲ್ಲಿ ಮೊದಲ ಎಟಿಎಂ ಮಶಿನ್‌ನನ್ನು ಮುಂಬೈನಲ್ಲಿ ಅಳವಡಿಸಲಾಗಿತ್ತು. 
 
ಎತ್ತರದ ಶಿಖರದಲ್ಲಿ ಎಟಿಎಂ....
 
ವಿಶ್ವದ ಅತಿ ಎತ್ತರದಲ್ಲಿರುವ ಎಟಿಎಂ ಮಶಿನ್ ನಾಥುಲಾದಲ್ಲಿ ಕಾಣಬಹುದಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಿರ್ವಹಿಸುತ್ತಿರುವ ಈ ಎಟಿಎಂ 14,300 ಅಡಿ ಎತ್ತರದ ಪ್ರದೇಶದಲ್ಲಿ ಪ್ರವಾಸಿಗರಿಗೆ ಸೇವೆ ನೀಡುತ್ತಿದೆ.
 
ವಿಶ್ವದ ಪರಮ ಒಬ್ಬಂಟಿ ಎಟಿಎಂ.....
 
ವಿಶ್ವದ ಪರಮ ಒಬ್ಬಂಟಿ ಎಟಿಎಂ ಮಶಿನ್‌ನನ್ನು ಅಂಟಾರ್ಟಿಕಾ ದೇಶದಲ್ಲಿ ಕಾಣಬಹುದಾಗಿದೆ. ಯುಎಸ್ ಸಂಶೋಧನೆ ಪ್ರಕಾರ ಈ ಪ್ರದೇಶದಲ್ಲಿ 2 ಎಟಿಎಂ ಮಶಿನ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ