30 ಲಕ್ಷಕ್ಕೂ ಹೆಚ್ಚು ಡೆಬಿಟ್ ಕಾರ್ಡ್ ಹ್ಯಾಕ್

ಗುರುವಾರ, 20 ಅಕ್ಟೋಬರ್ 2016 (18:09 IST)
ಆಧುನಿಕ ತಂತ್ರಜ್ಞಾನ ಎಷ್ಟು ಅನುಕೂಲವೋ, ಅಷ್ಟೇ ಅಪಾಯಕಾರಿ ಎನ್ನುವುದು ಈಗ ಮತ್ತೊಮ್ಮೆ ಸಾಬೀತಾಗಿದೆ. ಅದಕ್ಕೆ ಮುಖ್ಯ ಕಾರಣ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಸಂಖ್ಯಾತ ಡೆಬಿಟ್ ಕಾರ್ಡ್‌ಗಳನ್ನು ಕಳ್ಳರು ಹ್ಯಾಕ್ ಮಾಡಿದ್ದು!

ದೇಶದಲ್ಲಿ ಎಸ್.ಬಿ.ಐ.ನ ಸರಿ ಸುಮಾರು 30 ಲಕ್ಷ ಗ್ರಾಹಕರು ಡೆಬಿಟ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಅವರಲ್ಲಿ ಯಾರ್ಯಾರ ಕಾರ್ಡ್‌ಗಳ ಗುಪ್ತ ಮಾಹಿತಿಯನ್ನು ಕಳ್ಳ ತಂತ್ರಾಂಶದ ಮೂಲಕ ದೋಚಲಾಗಿದೆ ಎನ್ನುವುದು ಇನ್ನು ತಿಳಿದು ಬಂದಿಲ್ಲ. ಪರಿಣಾಮ ಪ್ರತಿಯೊಬ್ಬ ಎಸ್.ಬಿ.ಐ. ಗ್ರಾಹಕನು ಈಗ ತನ್ನ ಡೆಬಿಟ್ ಕಾರ್ಡ್‌ ಬಗ್ಗೆ ಆತಂಕ ಪಡುತ್ತಿದ್ದಾನೆ. ಸಾಲದೆಂಬಂತೆ ಬ್ಯಾಂಕ್‌ಗೆ ಮುಗಿ ಬಿದ್ದು ಉಳಿತಾಯ ಖಾತೆಯಲ್ಲಿರುವ ಹಣವನ್ನು ಚೆಕ್ ಮಾಡಿಕೊಳ್ಳುತ್ತಿದ್ದಾನೆ.
 
ಬೆಂಗಳೂರಿನ ಮೂಲದ ಗ್ರಾಹಕರೊಬ್ಬರ ಡೆಬಿಟ್ ಕಾರ್ಡ್‌‌ನ್ನು ಚೀನಾದಲ್ಲಿ ಬಳಕೆ ಮಾಡಿರುವ ಮಾಹಿತಿ ಹೊರ ಬೀಳುತ್ತಿದ್ದಂತೆ, ರಾಜ್ಯಾದ್ಯಂತ ಎಸ್.ಬಿ.ಐ. ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ. ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಕೆಲವು ಉದ್ಯಮಿಗಳು, ವ್ಯಾಪಾರಸ್ಥರು ಬ್ಯಾಂಕ್ ಗೆ ಕರೆ ಮಾಡಿ ತಮ್ಮ ಖಾತೆಯಲ್ಲಿ ಜಮಾ ಆಗಿರುವ ಹಣದ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಇನ್ನು ಕೆಲವರು ಕಸ್ಟಮರ್ ಕೇರ್ ಗೆ ಕರೆ ಮಾಡಿ, ಡೆಬಿಟ್ ಕಾರ್ಡ್‌ ಬ್ಲಾಕ್ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ಕರೆಗಳ ಮಹಾಪೂರದಿಂದಾಗಿ ಕಸ್ಟಮರ್ ಕೇರ್ ಗೆ ಕೆಲವಷ್ಟು ಗ್ರಾಹಕರ ಕರೆ ಹೋಗದಿರುವ ಕುರಿತು ಮಾಹಿತಿ ಲಭ್ಯವಾಗಿದೆ.
 
ಡೆಬಿಟ್ ಕಾರ್ಡ್‌ಗಳ ಗುಪ್ತ ತಂತ್ರಾಂಶ ಹ್ಯಾಕ್ ಮಾಡಿರುವುದನ್ನು ಖಚಿತಪಡಿಸಿಕೊಂಡ ಎಸ್.ಬಿ.ಐ. ಅಧಿಕಾರಿಗಳೂ, ಮುಂಜಾಗ್ರತ ಕ್ರಮವಾಗಿ ಗುರುವಾರ ಆರು ಲಕ್ಷ ಗ್ರಾಹಕರ ಡೆಬಿಟ್ ಕಾರ್ಡ್‌ ಬ್ಲಾಕ್ ಮಾಡಿದ್ದಾರೆ. ಅವುಗಳ ಬದಲಿಗೆ ಹೊಸ ಕಾರ್ಡ್‌ಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದೆ. ಡೆಬಿಟ್ ಕಾರ್ಡ್‌ ಬಳಕೆಯಲ್ಲಿ ಯಾವ ಬಗೆಯ ಅಪಾಯಗಳು ಎಟಿಎಂಗಳಲ್ಲಿ ಅಂತರ್ಗತವಾಗಿವೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ