ಡಿಜಿಟಲ್ ವಹಿವಾಟನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರಕಾರ ಜಾರಿಗೆ ತಂದ ಎರಡು ಯೋಜನೆಗಳಡಿ ಫೆಬ್ರವರಿ 7ರವರೆಗೆ 7.6 ಲಕ್ಷ ಮಂದಿ ಗ್ರಾಹಕರು ಮತ್ತು ವ್ಯಾಪಾರಿಗಳು ವಿಜೇತರಾಗಿ ಆಯ್ಕೆಯಾಗಿದ್ದಾರೆ ಎಂದು ನೀತಿ ಆಯೋಗ ತಿಳಿಸಿದೆ.
ಲಕ್ಕಿ ಗ್ರಾಹಕ್ ಯೋಜನೆ ಮತ್ತು ಡಿಜಿಧನ್ ವ್ಯಾಪಾರ ಯೋಜನೆಯಡಿ ರೂ.117.4 ಕೋಟಿ ಬಹುಮಾನ ಗೆದ್ದಿದ್ದಾರೆ ಎಂದು ನೀತಿ ಆಯೋಗ ತಿಳಿಸಿದೆ. ಪುರುಷರು ಮತ್ತು ಮಹಿಳೆಯರು ಡಿಜಿಟಲ್ ಮೂಲಕ ವಹಿವಾಟನ್ನು ಹೆಚ್ಚಾಗಿ ಮಾಡಿದ್ದಾರೆ.
ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಕರ್ನಾಟಕದ ವಿಜೇತರು ಟಾಪ್ ಐದು ಪಟ್ಟಿಯಲ್ಲಿದ್ದಾರೆ. ವಿಜೇತರಲ್ಲಿ ಹೆಚ್ಚಿನವರು 21-30ರ ನಡುವಿನ ವಯಸ್ಸಿನವರು. ಡಿಸೆಂಬರ್ 25, 2017ರಂದು ಜಾರಿಗೆ ತಂದ ಈ ಎರಡು ಯೋಜನೆಗಳು ಏಪ್ರಿಲ್ 14, 2017ರವರೆಗೂ ಜಾರಿಯಲ್ಲಿರುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.