ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಯ ಸಂತಸದಲ್ಲಿರುವ ವಾಹನ ಸವಾರರಿಗೆ ಒಂದು ಶಾಕಿಂಗ್ ನ್ಯೂಸ್
ಮಂಗಳವಾರ, 13 ನವೆಂಬರ್ 2018 (11:50 IST)
ನವದೆಹಲಿ : ಇತ್ತೀಚೆಗೆ ಪೆಟ್ರೋಲ್-ಡೀಸೆಲ್ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿರುವುದಕ್ಕೆ ವಾಹನ ಸವಾರರು ಸಂತಸದಿಂದಿರಬಹುದು. ಆದರೆ ಸದ್ಯದಲ್ಲೇ ಅವರಿಗೊಂದು ಶಾಕಿಂಗ್ ನ್ಯೂಸ್ ಕಾದಿದೆ.
ಅದೇನೆಂದರೆ ಮುಂದಿನ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ. ಹೌದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಇಳಿಕೆಯಾಗುತ್ತಿರುವ ಕಾರಣ ತೈಲ ಉತ್ಪಾದನಾ ರಾಷ್ಟ್ರಗಳ ಒಕ್ಕೂಟ 'ಒಪೆಕ್' ಉತ್ಪಾದನೆ ತಗ್ಗಿಸಲು ನಿರ್ಣಯ ಕೈಗೊಂಡಿದ್ದು, ಇದು ಪೆಟ್ರೋಲ್-ಡೀಸೆಲ್ ಬೆಲೆ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.
ಇನ್ನು ಒಮನ್ ತೈಲ ಸಚಿವ ಮಹಮ್ಮದ್ ಬಿನ್ ಹಮದ್ ಅಲ್ ರುಮಿ ಉತ್ಪಾದನೆ ತಗ್ಗಿಸಲು 'ಒಪೆಕ್'ನ ಬಹುತೇಕ ಸದಸ್ಯ ರಾಷ್ಟ್ರಗಳು ಒಪ್ಪಿಗೆ ನೀಡುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಅವರು 'ಒಂದು ದಿನಕ್ಕೆ 5 ಲಕ್ಷದಿಂದ 10 ಲಕ್ಷ ಬ್ಯಾರೆಲ್‌ವರೆಗೆ ತೈಲ ಉತ್ಪಾದನೆ ತಗ್ಗಿಸುವ ಸಾಧ್ಯತೆ ಇದೆ. ಆದರೆ, ಖಚಿತವಾಗಿ ಇಷ್ಟೇ ಎಂದು ಹೇಳುವುದು ಸರಿಯಲ್ಲ' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ